ಇತರೆ

ಸಾಸ್ತಾನ:ಮದುವೆ ಹಾಲ್‌ನಲ್ಲಿ ಚಿನ್ನಾಭರಣ ಕಳವು: ದೂರು ದಾಖಲು

Views: 847

ಕನ್ನಡ ಕರಾವಳಿ ಸುದ್ದಿ: ಸಾಸ್ತಾನ ಚನ್ನಕೇಶವ ಕಲ್ಯಾಣ ಮಂಟಪದಲ್ಲಿ ಅಗಸ್ಟ್ 31 ರಂದು ನಡೆದ ಮದುವೆ ಸಮಾರಂಭದಲ್ಲಿ ಚಿನ್ನಾಭರಣ ಕಳೆದುಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ ಚಾಂತಾರು ನಿವಾಸಿ ವೀರೇಂದ್ರ ಶೆಟ್ಟಿಗಾರ್ ಅವರ ಪತ್ನಿ ಯಶೋಧ ಅವರ ಕುತ್ತಿಗೆಯಲ್ಲಿದ್ದ 3.5 ಲಕ್ಷ ರೂಪಾಯಿ ಮೌಲ್ಯದ 35 ಗ್ರಾಂ ಚಿನ್ನದ ನಕ್ಲೆಸ್ ಮತ್ತು ವಧು ಮತ್ತು ವರನಿಗೆ ಉಡುಗೊರೆಯಾಗಿ ತಂದಿದ್ದ ಒಂದು ಲಕ್ಷ ಮೌಲ್ಯದ 10 ಗ್ರಾಂನ ಎರಡು ಚಿನ್ನದ ಉಂಗುರಗಳು ನಾಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಅಗಸ್ಟ್ 31ರಂದು ಅಪರಾಹ್ನ 2:30 ರ ಸುಮಾರಿಗೆ ಸಭಾಗ್ರಹದ ಪಕ್ಕದಲ್ಲಿಯೇ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ಹತ್ತಿಕೊಂಡ ಸಂದರ್ಭದಲ್ಲಿ ಜನರು ಅಡ್ಡಾದಿಡ್ಡಿಯಾಗಿ ಓಡಿದ್ದಾರೆ.ಈ ಸಂದರ್ಭದಲ್ಲಿ ಊಟ ಮಾಡುತ್ತಿರುವ ಯಶೋದ ಅವರು ಆಟ ಆಡುತ್ತಿರುವ ಮಗುವಿಗೆ ಏನಾದ್ರೂ ತೊಂದರೆಯಾದಿತು ಎಂದು ಓಡಿ ಬಂದಿದ್ದರು. ನಂತರ ಕುತ್ತಿಗೆಯಲ್ಲಿದ್ದ ನಕ್ಲೇಸ್ ಕಾಣೆಯಾಗಿದ್ದ ಬಗ್ಗೆ ತಿಳಿಯಿತು.

ವರ ಮತ್ತು ವಧುವಿಗೆ ಉಡುಗೊರೆ ನೀಡಲೆಂದು ವರನ ಸಹೋದರಿ ತಂದ 4 ಗ್ರಾಂ ಮತ್ತು 6 ಗ್ರಾಂ ಉಂಗುರ ನಾಪತ್ತೆಯಾಗಿದೆ. ಇದಕ್ಕೆ ಸಾಕ್ಷಿ ಎಂಬುವಂತೆ ಹಾಲಿನ ಪಕ್ಕದಲ್ಲಿಯೇ ಆಭರಣ ಹಾಕಿದ ಖಾಲಿ ಚೀಲ ಪತ್ತೆಯಾಗಿದೆ. ಆದರೆ ಮರ್ಯಾದೆಗೆ ಅಂಜಿ ಕೊಂಡು ವರನ ಕಡೆಯವರು ಯಾವುದೇ ದೂರು ನೀಡಲಿಲ್ಲ

ಈ ಕುರಿತು ಹಾಲಿನಲ್ಲಿ ಯಾವುದೇ ಸಿಸಿ ಕ್ಯಾಮೆರಾ ಇಲ್ಲದಿರುವುದರಿಂದ ಸಾಕ್ಷಿ ಕಲೆ ಹಾಕಲು ಸಾಧ್ಯವಾಗಿಲ್ಲದ್ದಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನಕ್ಲೆಸ್ ಕಳೆದುಕೊಂಡ ಯಶೋಧ ಅವರ ಪತಿ ವೀರೇಂದ್ರ ಅವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯಾರಿಗಾದರೂ ಚಿನ್ನಾಭರಣ ಸಿಕ್ಕಿದಲ್ಲಿ ಹಾಲಿನ ವ್ಯವಸ್ಥಾಪಕರಿಗೆ ನೀಡುವಂತೆ ಚಿನ್ನಾಭರಣ ಕಳೆದುಕೊಂಡವರು ವಿನಂತಿಸಿದ್ದಾರೆ

Related Articles

Back to top button