ಇತರೆ
ಕುಂದಾಪುರ ಎಕ್ಸ್ಪ್ರೆಸ್ ಡಾಟ್ ಕಾಂ ಸಂಪಾದಕ ಗಣೇಶ್ ಹೆಗ್ಡೆ ನಿಧನ

Views: 235
ಕನ್ನಡ ಕರಾವಳಿ ಸುದ್ದಿ: ಕುಂದಾಪರ ಎಕ್ಸ್ಪ್ರೆಸ್ ಡಾಟ್ ಕಾಂನ ಸಂಪಾದಕ ಗಣೇಶ್ ಹೆಗ್ಡೆ (55) ಹೃದಯಾಘಾತದಿಂದ ಕುಂದಾಪುರದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರಿ ಇದ್ದಾರೆ.
ರಾಮಕ್ಷತ್ರಿಯ ಯುವಕ ಮಂಡಳಿಯ ಸಾರ್ವಜನಿಕ ಗಣೇಶೋತ್ಸವದ ಗಣೇಶ ವಿಸರ್ಜನೆಯಲ್ಲಿ ಭಾಗವಹಿಸಿದ್ದ ಅವರು ಮನೆಗೆ ವಾಪಸಾದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕಳೆದ 3 ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಸಿಂಧೂ ಗ್ರಾಫಿಕ್ಸ್ ಜಾಹೀರಾತು ಸಂಸ್ಥೆ ಹೊಂದಿದ್ದ ಇವರು ನಾಡಿನ ನಾನಾ ಪತ್ರಿಕೆಗಳಿಗೆ ಜಾಹೀರಾತು ಒದಗಿಸುತ್ತಿದ್ದರು. ತಮ್ಮದೇ ಕುಂದಾಪುರ ಎಕ್ಸ್ಪ್ರೆಸ್ ಡಾಟ್ ಕಾಂ ವೆಬ್ ಮೂಲಕ ಖ್ಯಾತರಾಗಿದ್ದರು. ಜತೆಯಲ್ಲಿ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಮಕ್ಷತ್ರಿಯ ಯುವಕ ಮಂಡಳಿ ಸದಸ್ಯರಾಗಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಗುರುತಿಸಿಕೊಂಡಿದ್ದರು.