ಕುಂದಾಪುರ: ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಅಸ್ವಸ್ಥ ವ್ಯಕ್ತಿ ಸಾವು

Views: 242
ಕನ್ನಡ ಕರಾವಳಿ ಸುದ್ದಿ: ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಅಸ್ವಸ್ಥ ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ನಡೆದಿದೆ.
ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಉದ್ಯೋಗಿಯಾಗಿರುವ ತ್ರಾಸಿ ನಿವಾಸಿ ವಿ. ಅಶೋಕ (64) ಮೃತಪಟ್ಟವರು.
ಅವರು ಆ. 31ರಂದು ಜನ್ನಾಡಿಯ ಪರಿಚಿತರ ಮನೆಯಲ್ಲಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ.4 ವರ್ಷಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆ. 31ರ ಮಧ್ಯಾಹ್ನ ಪರಿಚಿತರಾದ ಜನ್ನಾಡಿಯ ಸೀತಾ ಅವರ ಮನೆಗೆ ಹೋಗಿದ್ದರು. ತಲೆ ತಿರುಗುತ್ತದೆ ಸ್ವಲ್ಪ ನೀರು ಕೊಡಿ ಎಂದು ಕೇಳಿ ಕುಡಿದು ಬಳಿಕ ಸ್ವಲ್ಪ ಹೊತ್ತು ಅಲ್ಲಿಯೇ ಮಲಗಿದ್ದರು. ತೀರಾ ಅಸ್ವಸ್ಥರಾಗಿ ಮಾತನಾಡದೇ ಇದ್ದ ಕಾರಣ ಕೂಡಲೇ ಆ್ಯಂಬುಲೆನ್ಸ್‌ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಂಡು ಹೋಗಲಾಯಿತು. ಆದರೆ ಅಷ್ಟರಲ್ಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು.
ಪುತ್ರ ರಜತ್ ಕುಮಾರ್ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.