ಸಾಂಸ್ಕೃತಿಕ
ಖ್ಯಾತ ಕಿರುತೆರೆ ನಟಿ ಪ್ರಿಯಾ ಮರಾಠೆ ನಿಧನ

Views: 162
ಕನ್ನಡ ಕರಾವಳಿ ಸುದ್ದಿ: ಹಿಂದಿಯ ಹಲವು ಜನಪ್ರಿಯ ಧಾರವಾಹಿಗಳಲ್ಲಿ ಅಭಿನಯಿಸಿರುವ ನಟಿ ಪ್ರಿಯಾ ಮರಾಠೆ ಭಾನುವಾರ ಮುಂಬೈನಲ್ಲಿ ನಿಧನರಾದರು. 38 ವರ್ಷ ವಯಸ್ಸಿನ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. 1987 ಏಪ್ರಿಲ್ 23ರಂದು ಮುಂಬೈನಲ್ಲಿ ಜನಿಸಿದ ಪ್ರಿಯಾ ಅವರು ಮರಾಠಿ ಧಾರವಾಹಿ ‘ಯಾ ಸುಖನೋಯ’ ಮೂಲಕ ನಟನ ಜೀವನಕ್ಕೆ ಕಾಲಿಟ್ಟಿದ್ದರು. ಜೀ ವಾಹಿನಿಯಲ್ಲಿ ಪ್ರಸಾರವಾದ ‘ಪವಿತ್ರಾ ರಿಶ್ತಾ’ ಧಾರವಾಹಿಯಲ್ಲಿ ‘ವರ್ಷಾ ಸತೀಶ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರವು ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ನಂತರ ‘ಬಡೇ ಅಚ್ಚೆ ಲಗ್ತೆ ಹೈ’, ‘ತೂ ತಿಥೆ ಮೆ’, ‘ಭಾಗೇ ರೇ ಮಾನ್’, ‘ಜಯಸ್ತುತೆ’ ಮತ್ತು ‘ಭಾರತ್ ಕಾ ವೀರ್ ಪುತ್ರ ಮಹಾರಾಣಾ ಪ್ರತಾಪ್’ ಮುಂತಾದ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.