ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ- ರೋಷನ್ ಜೊತೆ ಮದುವೆ

Views: 271
ಕನ್ನಡ ಕರಾವಳಿ ಸುದ್ದಿ: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಕೊಡಗು ಮೂಲದ ಉದ್ಯಮಿ ರೋಷನ್ ಜೊತೆ ಇಂದು ವಿವಾಹವಾಗಿದ್ದಾರೆ. ಅನುಶ್ರೀ ಮದುವೆ ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದಲ್ಲಿ ನಡೆದಿದೆ. ನಿರೂಪಕಿ ಅನುಶ್ರೀ ಹಾಗೂ ರೋಷನ್ ಅದ್ಧೂರಿ ಮದುವೆಗೆ ಶಿವರಾಜ್ ಕುಮಾರ್, ರಾಜ್ ಬಿ ಶೆಟ್ಟಿ, ಶರಣ್, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ಶುಭ ಹಾರೈಸಿದ್ದಾರೆ.
ತಾಳಿ ಕಟ್ಟುವ ವೇಳೆ ಭಾವುಕ ಶಾಲಾ-ಕಾಲೇಜು ದಿನಗಳಲ್ಲಿ ಕಷ್ಟದಲ್ಲಿ ಜೀವನ ಸಾಗಿಸಿ ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡು ಬೆಂಗಳೂರಿಗೆ ಬಂದು ಚಿತ್ರರಂಗ, ಕನ್ನಡ ಕಿರುತೆರೆಯಲ್ಲಿ ಕಷ್ಟಪಟ್ಟು ವೃತ್ತಿ ಕಂಡುಕೊಂಡು ಇಂದು ಸ್ಟಾರ್ ನಿರೂಪಕಿಯಾಗಿ ಬೆಳೆದು ನಿಂತಿರುವ ಅನುಶ್ರೀ ವೈಯಕ್ತಿಕ ಜೀವನದಲ್ಲಿ ತಮ್ಮ ತಾಯಿ ಮತ್ತು ತಮ್ಮನ ಜವಾಬ್ದಾರಿ ವಹಿಸಿಕೊಂಡಿದ್ದರು. ಇಷ್ಟು ವರ್ಷಗಳ ಕಾಲ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಜವಾಬ್ದಾರಿಗಳನ್ನು ನಿರ್ವಹಿಸಿ ಮದುವೆಯಾಗುವ ವೇಳೆ ಅನುಶ್ರೀ ಭಾವುಕರಾಗಿದ್ದು ಕಂಡುಬಂತು.