ಕರಾವಳಿ

ಧರ್ಮಸ್ಥಳ: ಗುಂಡಿ ಆಗೆತಕ್ಕೆ ತಾತ್ಕಾಲಿಕ ಬ್ರೇಕ್..    ಅನಾಮಿಕ ತಪ್ಪೊಪ್ಪಿಗೆ..? ತಿಮರೋಡಿ ಬಂಧನಕ್ಕೆ ಸೂಚನೆ

Views: 199

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದಲ್ಲಿ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಾಗೂ ಪರಿಷತ್‌ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆಯ ಸಮಯದಲ್ಲಿಯೇ, ಧರ್ಮಸ್ಥಳದಲ್ಲಿರುವ ಎಸ್‌ಐಟಿ ಮುಂದೆ ಅನಾಮಧೇಯ ವ್ಯಕ್ತಿ ತಪ್ರೊಪ್ಪಿಕೊಂಡಿದ್ದಾನೆ ಎನ್ನುವ ಮಾತುಗಳು ಪ್ರಕರಣಕ್ಕೆ ಭಾರಿ ಟ್ವಿಸ್ಟ್‌ ನೀಡಿದೆ.

ಮೂಲಗಳ ಪ್ರಕಾರ, ‘ಒತ್ತಡಕ್ಕೆ ಒಳಗಾಗಿ ಸುಳ್ಳು ಹೇಳಿಕೆ ದಾಖಲಿಸಿದ್ದೇನೆ’ ಎಂದು ಎಐಟಿ ಮುಂದೆ ಹೇಳಿದ್ದಾನೆ ಎನ್ನಲಾಗಿದೆ. ಆದ ಈ ವಿಷಯಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಥವಾ ಸರಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ಅನಾಮಧೇಯ ವ್ಯಕ್ತಿ, 2014ರಲ್ಲಿ ಧರ್ಮಸ್ಥಳವನ್ನು ತೊರೆದು ತಮಿಳುನಾಡಿನಲ್ಲಿ ನೆಲೆಸಿದ್ದ.

2023ರಲ್ಲಿ ಕೆಲವು ಜನರ ಗುಂಪು ಆತನನ್ನು ಸಂಪರ್ಕಿಸಿದಾಗ ನಾನು ಕಾನೂನಿನ ಪ್ರಕಾರ ಶವಗಳನ್ನು ಹೂತಿದ್ದೇನೆ ಎಂದು ಒಪ್ಪಿಕೊಂಡಿದ್ದನು. ಆದರೆ, ಆ ಗುಂಪು ಆತನಿಗೆ ಬುರುಡೆಯೊಂದನ್ನು ನೀಡಿ ಪೊಲೀಸರ ಮುಂದೆ ಶರಣಾಗುವಂತೆ ಒತ್ತಡ ಹೇರಿತ್ತು. ‘ಮೂವರು ನನಗೆ ಏನು ಹೇಳಬೇಕೆಂದು ತಿಳಿಸಿದ್ದರು. ಒತ್ತಡಕ್ಕೆ ಒಳಗಾಗಿ ಸುಳ್ಳು ಹೇಳಿಕೆ ನೀಡಿದೆ’ ಎಂದು ಆತ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ತಿಮರೋಡಿ ವಿರುದ್ದ ಕ್ರಮಕ್ಕೆ ಸೂಚನೆ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯಾ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಮಹೇಶ್ ತಿಮರೋಡಿ ಬಂಧನಕ್ಕೆ ಗೃಹ ಸಚಿವಾಲಯ ಆದೇಶ ನೀಡಿದೆ ಎಂದು ಹೇಳಲಾಗಿದೆ. ಸೌಜನ್ಯಾ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಸಾಮಾಜಿಕ ಜಾಲತಾಣದಲ್ಲಿ ನಾಲಿಗೆ ಹರಿಬಿಟ್ಟಿದ್ದು, ಬಂಧಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಗಳೂರು ಪೊಲೀಸ್‌ ಆಯುಕ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಗುಂಡಿ ಆಗೆತಕ್ಕೆ ತಾತ್ಕಾಲಿಕ ಬ್ರೇಕ್..

ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು, ಎಫ್‌ಎಸ್ಎಲ್ ವರದಿ ಬರುವ ತನಕ ಮಣ್ಣು ಆಗತವನ್ನು ಸ್ಥಗಿತಗೊಳಿಸಲು ಎಸ್‌ಐಟಿ ತೀರ್ಮಾನಿಸಿದೆ. ಈ ವಿಚಾರವಾಗಿ ಸಾಕಷ್ಟು ಊಹಾಪೋಹ ಸೃಷ್ಟಿಯಾಗುತ್ತಿದೆ. ಇದರಿಂದ ಭಕ್ತರಿಗೂ ಅನುಮಾನ, ಆತಂಕ ಆರಂಭವಾಗುತ್ತಿದೆ. ಹೀಗಾಗಿ ಅದನ್ನು ಬಹಳ ಸೂಕ್ಷ್ಮವಾಗಿ ಪರಿಗಣಿಸಬೇಕಾಗಿದೆ ಎಂದರು.

Related Articles

Back to top button