ಸಾಂಸ್ಕೃತಿಕ

“ಸಿಹಿ ಸುದ್ದಿ ಕೊಟ್ಟ ರೆಬಲ್ ಚೈತ್ರಾ ಕುಂದಾಪುರ” ಎಂದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಫೈರ್ ಬ್ರ್ಯಾಂಡ್

Views: 265

ಕನ್ನಡ ಕರಾವಳಿ ಸುದ್ದಿ: ಕೆಲ ತಿಂಗಳ ಹಿಂದೆ 12 ವರ್ಷಗಳಿಂದ ಪ್ರೀತಿಸುತ್ತಿದ್ದ ಶ್ರೀಕಾಂತ್ ಕಶ್ಯಪ್ ಎಂಬವರ ಜೊತೆ ಚೈತ್ರಾ ವಿವಾಹವಾಗಿದೆ.ಇದರ ಬೆನ್ನಲ್ಲೇ ಚೈತ್ರಾ ಕುಂದಾಪುರ ಮನೆ ಜಗಳ ಬೀದಿಗೆ ಬಂದಿತ್ತು

ಚೈತ್ರಾ ಹಾಗೂ ಅವರ ತಂದೆ ಬಾಲಕೃಷ್ಣ ನಡುವೆ ಆರೋಪಗಳ ಗುದ್ದಾಟ ನಡೆಯಿತು. ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕವೂ ಚೈತ್ರಾ ಒಂದಲ್ಲ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿದ್ದಾರೆ. ಇದೀಗ ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮೈಚಳಿ ಬಿಡಿಸಿದ್ದಾರೆ. ಹಿಂದೂ ಫೈರ್ ಬ್ರ್ಯಾಂಡ್. ಇನ್ಸ್ಟಾಗ್ರಾಮ್ ಮತ್ತು ವಾಟ್ಸ್ಆ್ಯಪ್ನಲ್ಲಿ ತಮ್ಮ ಬಗ್ಗೆ ಹಾಕಿರುವ ಸುದ್ದಿ ಸುಳ್ಳು ಎಂದಿರುವ ಚೈತ್ರಾ, ಕ್ಲಿಕ್ ಬೈಟ್ ಗಾಗಿ ಸುಳ್ಳು ಸುದ್ದಿ ಹರಡುವ ವೆಬ್ ಸೈಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

‘‘ಮದುವೆಯಾದ ಕೆಲವೇ ತಿಂಗಳಲ್ಲಿ ಕನ್ನಡಿಗರಿಗೆ ಸಿಹಿ ಸುದ್ದಿ ಕೊಟ್ಟ ರೆಬಲ್ ಚೈತ್ರ ಕುಂದಾಪುರ. ಫಿದಾ ಆದ ಕರ್ನಾಟಕ’’ ಎಂಬ ಶೀರ್ಷಿಕೆಯಲ್ಲಿ ಚೈತ್ರಾ ಕುಂದಾಪುರ ಬಗ್ಗೆ ಸುದ್ದಿಯೊಂದು ವೈರಲ್ ಆಗಿತ್ತು. ಅದರ ಸ್ಕ್ರೀನ್ ಶಾಟ್ ತೆಗೆದು ತಮ್ಮ ಇನ್ಸ್ಟಾಗ್ರಾಮ್ ಗೆ ಪೋಸ್ಟ್ ಮಾಡಿರುವ ಚೈತ್ರಾ ಕುಂದಾಪುರ, ಇದು ಫೇಕ್ ನ್ಯೂಸ್ ಎಂದಿದ್ದಾರೆ.

‘‘ಕ್ಲಿಕ್ ಬೈಟ್ ಆಸೆಗೆ ಕಂಡವರ ಮನೆಯ ಖಾಸಗಿ ವಿಷಯಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಇಂತಹ ಲೋ ಕ್ಲಾಸ್ ವೆಬ್ ನ್ಯೂಸ್ ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾನೂನು ಬರಬೇಕಿದೆ. ಇವರ ಲಾಲಸೆಗೆ ಇನ್ನೊಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಇವರು ಹರಡಿಸುವ ಸುದ್ದಿಗಳು ನಮ್ಮ ಮತ್ತು ನಮ್ಮ ಕುಟುಂಬದವರ ಮೇಲೆ ಎಂತಹ ಪರಿಣಾಮ ಬೀರಬಹುದೇನ್ನುವ ಚಿಕ್ಕ ಕಲ್ಪನೆಯೂ ಇರಲಿಕ್ಕಿಲ್ಲ. ಇತ್ತೀಚಿಗೆ ಇಂತಹ ಮುಖ ತೋರಿಸದೆ ಸುಳ್ಳು ಹಬ್ಬಿಸುವ ಯೂಟ್ಯೂಬ್ ಚಾನೆಲ್ ಗಳಿಗೆ ಕಡಿವಾಣ ಹಾಕಲು ಸ್ವತಃ ಯೂಟ್ಯೂಬ್ ಮುಂದಾಗಿತ್ತು. ವ್ಯವಸ್ಥೆ ಕೂಡ ಆ ದಿಕ್ಕಿನಲ್ಲಿ ಯೋಚಿಸಬೇಕಿದೆ’’ ಎಂದು ಚೈತ್ರಾ ಬರೆದುಕೊಂಡಿದ್ದಾರೆ.

Related Articles

Back to top button
error: Content is protected !!