ಧಾರ್ಮಿಕ

ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಪೇಜಾವರ ಶ್ರೀಗಳ ಭೇಟಿ

Views: 44

ಕನ್ನಡ ಕರಾವಳಿ ಸುದ್ದಿ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಪರ್ಯಾಯ ಅರ್ಚಕರು ಆದರದಿಂದ ಬರಮಾಡಿಕೊಂಡರು, ನಂತರ ಶ್ರೀಪಾದರು ದೇವರಿಗೆ ವಿಶೇಷ ಮಂಗಳಾರತಿ ನೆರವೇರಿಸಿದರು.

ವೇ|ಮೂ| ಹೂವಿನಕೆರೆ ವಾದಿರಾಜ ಭಟ್, ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ವಿದ್ವಾನ್ ರಘುಪತಿ ಉಪಾಧ್ಯಾಯ ಮತ್ತು ಆಯುರ್ವೇದ ವೈದ್ಯ ಡಾ। ಕೆ.ಪ್ರಾಣದೇವ ಉಪಾಧ್ಯಾಯ ಅವರಿಗೆ ಫಲ ಮಂತ್ರಾಕ್ಷತೆಯೊಂದಿಗೆ ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ  ಶ್ರೀರಮಣ ಉಪಾಧ್ಯಾಯ, ಸಹ ಧರ್ಮದರ್ಶಿಗಳಾದ ಪದ್ಮನಾಭ ಉಪಾಧ್ಯಾಯ, ನಿರಂಜನ ಉಪಾಧ್ಯಾಯ ಮತ್ತು ಆಡಳಿತ ಸಿಬಂದಿ, ಪರ್ಯಾಯ ಅರ್ಚಕ ವ್ಯಾಸ ಉಪಾಧ್ಯಾಯ ಮತ್ತು ಸಹೋದರರು, ಅರ್ಚಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Related Articles

Back to top button