ಸಾಂಸ್ಕೃತಿಕ

ಮೂರು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಕನ್ನಡದ ಸ್ಟಾರ್ ಗಾಯಕಿ ಅಖಿಲಾ ಪಜಿಮಣ್ಣು

Views: 153

ಕನ್ನಡ ಕರಾವಳಿ ಸುದ್ದಿ: ಕನ್ನಡದ ಸ್ಟಾರ್ ಗಾಯಕಿ ಅಖಿಲಾ ಪಜಿಮಣ್ಣು ತಮ್ಮ ಅದ್ಭುತ ಕಂಠದಿಂದಲೇ ಮನೆ ಮಾತಾಗಿದ್ದರು. ಆದ್ರೆ ಮೂರು ವರ್ಷಗಳ ದಾಂಪತ್ಯ ಜೀವನಕ್ಕೆಅಂತ್ಯ ಹಾಡಿ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ.

ಅಖಿಲಾ ಪಜಿಮಣ್ಣು ಅವರು ಡಿವೋರ್ಸ್ ಅರ್ಜಿ ಮಾಡಿರುವ ಸುದ್ದಿ ವೈರಲ್ ಆಗಿದೆ. ಮೂರು ವರ್ಷಗಳ ಹಿಂದೆ ಅಖಿಲಾ ಅವರು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಡಿವೋರ್ಸ್ ಅರ್ಜಿ ವಿಚಾರ ವೈರಲ್ ಆದ ಬಳಿಕ ಅಖಿಲ ಪಜಿಮಣ್ಣು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಿಂದ ಪತಿಯ ಜೊತೆಗೆ ಇದ್ದ ಫೋಟೋಸ್ ಡಿಲೀಟ್ ಮಾಡಿದ್ದಾರೆ. ಆದರೆ ತಮ್ಮ ಮದುವೆ ಫೋಟೋ ಹಾಗೂ ಕುಟುಂಬದ ಜೊತೆಗೆ ಇರೋ ಎರಡು ಫೋಟೋವನ್ನು ಮಾತ್ರ ಡಿಲೀಟ್ ಮಾಡಿಲ್ಲ.

ಇನ್ನೂ, ಗಾಯಕಿ ಅಖಿಲಾ ಪಜಿಮಣ್ಣು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ 2021ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ 2022ರಲ್ಲಿ ಧನಂಜಯ್ ಶರ್ಮ ಎಂಬುವವರ ಜೊತೆಗೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಗಾಯಕಿ ಅಖಿಲಾ ಅವರು 23 ವರ್ಷಕ್ಕೆ ಮದುವೆಯಾಗಿ ಪತಿಯೊಂದಿಗೆ ವಿದೇಶದಲ್ಲಿ ವಾಸವಾಗಿದ್ದರು. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿರೋ ಗಾಯಕಿ ಆಗಾಗ ಪತಿ ಜೊತೆಗೆ ಕ್ಲಿಕ್ಕಿಸಿಕೊಂಡಿರೋ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದರು.

Related Articles

Back to top button