ಕುಂದಾಪುರ ನಿವೃತ್ತ ದೈಹಿಕ ಪರಿವೀಕ್ಷಣಾಧಿಕಾರಿ ಮಂಜುನಾಥ ಶೆಟ್ಟಿಗೆ ಸನ್ಮಾನ
Views: 21
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕು ಮಟ್ಟದ ಕುಸ್ತಿ ಪಂದ್ಯಾಟ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿನ ಪ್ರೌಢಶಾಲಾ ನೇತೃತ್ವದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ 4 ವರ್ಷದಿಂದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಾ ಬಂದವರು ಶ್ರೀ ಮಂಜುನಾಥ ಶೆಟ್ಟಿಯವರು, ಪ್ರತಿ ವರ್ಷವೂ ಅನೇಕ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿದ ಕೀರ್ತಿ ಇವರದ್ದು. ಅದೇ ರೀತಿ ಈ ಸಾಲಿನಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ 11 ಚಿನ್ನ 5 ಬೆಳ್ಳಿ 2 ಕಂಚು ಬಹುಮಾನ ಪಡೆದು ತಾಲೂಕು ಮಟ್ಟದಲ್ಲಿ ಸಮಗ್ರ ಪ್ರಶಸ್ತಿ ಕುಂದಾಪುರ ಪ್ರೌಢಶಾಲಾ ವಿಭಾಗ ಪಡೆದುಕೊಂಡಿತ್ತು. ಇದಕ್ಕೆ ಕಾರಣೀಭೂತರಾದ ಶ್ರೀ ಮಂಜುನಾಥ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಉಪಪ್ರಾಂಶುಪಾಲರಾದ ಶ್ರೀ ಕಿರಣ ಹೆಗ್ಡೆ, ಕಾಲೇಜು ಉಪನ್ಯಾಸಕರಾದ ಕಾಳಾವರ ಶ್ರೀ ಉದಯ ಕುಮಾರ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಕುಸುಮಾಕರ ಶೆಟ್ಟಿ ಹಾಗೂ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸತ್ಯಾನಂದ ಸಾಲಿನ್ಸ್ ಉಪಸ್ಥಿತರಿದ್ದರು.






