ಇತರೆ

ಈಜಲು ಹೋಗಿದ್ದ ಯುವಕ ನೀರುಪಾಲು: ಕೆರೆಗೆ ಹಾರಿ ಮೃತದೇಹ ಮೇಲಕ್ಕೆ ತಂದ ಕುಮಟಾ ಪೊಲೀಸ್ ಠಾಣೆಯ ಪಿಎಸ್ಐ

Views: 12

ಕನ್ನಡ ಕರಾವಳಿ ಸುದ್ದಿ: ಸ್ನೇಹಿತರ ಜೊತೆ ಈಜಲು ಹೋಗಿದ್ದ ಯುವಕ ವಾಲಗಳ್ಳಿ ಜಡ್ಡಿಕೆರೆಯಲ್ಲಿ ನೀರುಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ.

ಪ್ರಶಾಂತ್ ಕೇಶವ ಮುಕ್ರಿ (18) ಮೃತ ಯುವಕ. ಸ್ನೇಹಿತರ ಜೊತೆ ಜಡ್ದಿಕೆರೆಗೆ ಈಜಲೆಂದು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಬಂದು 2 ಗಂಟೆಯಾದರೂ ಅಗ್ನಿಶಾಮಕ ಸಿಬ್ಬಂದಿ ಶವ ಮೇಲಕೆತ್ತದೇ ವಿಳಂಬ ಮಾಡುತ್ತಿತ್ತು. ಅಗ್ನಿಶಾಮಕ ದಳದ ಕಾರ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಘಟನಾ ಸ್ಥಳಕ್ಕೆ ಆಗಮಿಸಿದ ಕುಮಟಾ ಪಿಎಸ್ಐ ಖಾದರ್ ಪಾಷಾ, ಸ್ವತಃ ಕೆರೆಗೆ ಹಾರಿ ಮೃತದೇಹವನ್ನು ಮೇಲೆ ತಂದಿದ್ದಾರೆ. ಪಿಎಸ್ಐ ಸಾಹಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button
error: Content is protected !!