ಇತರೆ
ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್
Views: 47
ಕನ್ನಡ ಕರಾವಳಿ ಸುದ್ದಿ: ಕೋತಿರಾಜ್ ಅಲಿಯಾಸ್ ಜ್ಯೋತಿರಾಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿತ್ರದುರ್ಗದ ಮೆದೆಹಳ್ಳಿ ರಸ್ತೆಯ ವೈಭವ ಗಾರ್ಡನ್ನಲ್ಲಿ ಜ್ಯೋತಿರಾಜ್ ವಿವಾಹ ಅದ್ಧೂರಿಯಾಗಿ ನಡೆಯಿತು.

ಬಹುದಿನಗಳ ಹಿಂದೆಯೇ ವಿವಾಹ ಆಗಬೇಕಿದ್ದ ಜ್ಯೋತಿರಾಜ್ ಪರ್ವತಾರೋಹಣದ ವೇಳೆ ಬಿದ್ದು ಗಾಯಗೊಂಡಿದ್ರು. ಈ ವೇಳೆ ಅವರ ವಿವಾಹ ಕ್ಯಾನ್ಸಲ್ ಆಗಿತ್ತು. ಇದೀಗ ತಮ್ಮ ಸಹೋದರಿಯ ಪುತ್ರಿಯನ್ನು ವಿವಾಹವಾಗಿದ್ದಾರೆ. ಈ ವೇಳೆ ಕುಟುಂಬಸ್ಥರು, ಬಂಧುಗಳು ಸೇರಿದಂತೆ ಅಭಿಮಾನಿಗಳು ಆಗಮಿಸಿ ಜ್ಯೋತಿರಾಜ್, ನಿವೇದಿತಾ ದಂಪತಿಗೆ ಶುಭ ಕೋರಿದ್ದಾರೆ.






