ಇತರೆ

ಪತ್ನಿಯ ಖಾಸಗಿ ವಿಡಿಯೋ ರಹಸ್ಯವಾಗಿ ಚಿತ್ರೀಕರಿಸಿ ಹಣಕ್ಕಾಗಿ ಮಾರಾಟ ಮಾಡಿದ ಪತಿರಾಯ!

Views: 0

ಕನ್ನಡ ಕರಾವಳಿ ಸುದ್ದಿ: ಪತ್ನಿಯ ಖಾಸಗಿ ವಿಡಿಯೊಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಅಶ್ಲೀಲ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡಿದ ಅಮಾನವೀಯ ಘಟನೆ ನಡೆದಿದೆ. ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಕೇರಳಂನ ಮಲಪ್ಪುರಂ ಮೂಲದ ಅಪರಾಧಿ ಪತ್ನಿಯ ಅನುಮತಿಯಿಲ್ಲದೆ ಆಕೆಯ ಖಾಸಗಿ ವಿಡಿಯೊಗಳನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದ ಈತ, ಅವುಗಳನ್ನು ಇಂಟರ್‌ನೆಟ್‌ ಹಾಗೂ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮಗಳಲ್ಲಿ ಅಪ್‌ಲೋಡ್ ಮಾಡಿದ್ದ ಎನ್ನಲಾಗಿದೆ.

ವರದಿಯ ಪ್ರಕಾರ, ಅಪರಾಧಿ ಕಳೆದ ನಾಲ್ಕು ವರ್ಷಗಳಿಂದ ತನ್ನ ಪತ್ನಿ ಮತ್ತು ಮಗಳೊಂದಿಗೆ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದ. ಅವರು ಅಲ್ಲಿದ್ದಾಗ ಆಕೆಯ ಖಾಸಗಿ ವಿಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಕುರಿತು ಸ್ನೇಹಿತರು ತಿಳಿಸಿದ ನಂತರ ಈ ದುಷ್ಕೃತ್ಯ ಬೆಳಕಿಗೆ ಬಂದವು. ಪೊಲೀಸರ ಮಾಹಿತಿ ಪ್ರಕಾರ, ಈ ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾಕ್ಕೆ ಅಪ್‌ಲೋಡ್ ಮಾಡುವ ವಿಷಯದಲ್ಲಿ ಪತ್ನಿಯು ಪತಿಗೆ ಎಚ್ಚರಿಕೆ ನೀಡಿದ್ದಳು. ಇದರೊಂದಿಗೆ ಅಪರಾಧಿಯು ಪತ್ನಿಗೆ ವೈಫ್ ಸ್ವಾಪಿಂಗ್ ಕೃತ್ಯದಲ್ಲಿ ತೊಡಗಿಸಿಕೊಳ್ಳುವಂತೆಯೂ ಒತ್ತಡ ಹೇರುತ್ತಿದ್ದ. ಆಕೆ ಇದಕ್ಕೆಂದೂ ಒಪ್ಪಿರಲಿಲ್ಲ.

ಘಟನೆಯ ನಂತರ, ದಂಪತಿ ಕೇರಳಂಗೆ ಹಿಂತಿರುಗಿದಾಗ ಪತ್ನಿಯು ಮಾನಸಿಕ ಆಪ್ತ ಸಮಾಲೋಚನೆ ತೆಗೆದುಕೊಳ್ಳುವಂತೆ ಪತಿಗೆ ಹೇಳಿದ್ದಾಳೆ. ವಿಡಿಯೊವನ್ನು ಪತ್ನಿ ನೋಡಿದ್ದಳು. ಈ ವಿಡಿಯೊದ ಬಗ್ಗೆ ಪ್ರಶ್ನಿಸಿದಾಗ, ಅಪರಾಧಿಯು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಆಕೆ ಪೋಲಿಸರಿಗೆ ದೂರು ನೀಡಿದ್ದಾಳೆ. ದೂರಿನ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೋಮವಾರ ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಹಾಗೂ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಬಳಿಯಿದ್ದ ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಿದೇಶಿ ಅಥವಾ ಸ್ಥಳೀಯ ವೆಬ್‌ಸೈಟ್‌ಗಳಿಗೆ ಈ ವಿಡಿಯೊಗಳನ್ನು ಮಾರಾಟ ಮಾಡಲಾಗಿದೆಯೇ ಅಥವಾ ಹಣ ಸಂಪಾದನೆಗೆ ಬಳಲಾಗಿದೆಯೇ ಎಂಬ ಕೋನದಲ್ಲಿ ಸೈಬರ್ ಕ್ರೈಮ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Related Articles

Back to top button
error: Content is protected !!