ಸಾಮಾಜಿಕ

ಬ್ರಹ್ಮಾವರ: ಬೈಕಾಡಿ ಪದ್ಮಶಾಲಿ ಸಂಘಟನೆ “ವಾರ್ಷಿಕ ಮಹಾಸಭೆ” 

Views: 148

ಕನ್ನಡ ಕರಾವಳಿ ಸುದ್ದಿ: ಬೈಕಾಡಿ ಪದ್ಮಶಾಲಿ ಸಂಘಟನೆ ಇದರ 12ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ  ಬೈಕಾಡಿ  ಗಾಂಧಿನಗರದ ಶ್ರೀರಾಮ ಮಿತ್ರಕೂಟ ಭಜನಾ ಮಂದಿರ ಇದರ ವಠಾರದಲ್ಲಿ ನಡೆಯಿತು.

ಬೆಳಿಗ್ಗೆ 9:30ಕ್ಕೆ ಸತ್ಯನಾರಾಯಣ ಪೂಜೆ ನಡೆಯಿತು. ನಂತರ 11 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಶ್ರೀ ವಿಠ್ಠಲ್ ಶೆಟ್ಟಿಗಾರ್ ಸಗ್ರಿ ನಿವೃತ್ತ ಎಜಿಎಂ ಎಸ್ ಬಿ ಐ, ದ.ಕ.ಪದ್ಮಶಾಲಿ ಮಹಾಸಭಾದ ಅಧ್ಯಕ್ಷರು  ಶ್ರೀ ರವಿ ಶೆಟ್ಟಿಗಾರ ಕಾರ್ಕಳ, ಕವಯತ್ರಿ  ಶ್ರೀಮತಿ ಶೋಭಾ ಹರಿಪ್ರಸಾದ್ ಉಡುಪಿ,  ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ  ಮೊಕ್ತೇಸರರಾದ ಸುರೇಶ್ ಶೆಟ್ಟಿಗಾರ್ ಸಾಲಿಕೇರಿ, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಉಪಾಧ್ಯಕ್ಷರು ತಿಮ್ಮಪ್ಪ ಶೆಟ್ಟಿಗಾರ್, ದಕ್ಷಿಣ ಕನ್ನಡ ವಿದ್ಯಾವರ್ಧಕ ಸಂಘದ ಮಹಾಸಭಾ ಕಾರ್ಯದರ್ಶಿ ಸುಧಾಕರ  ಶೆಟ್ಟಿಗಾರ್ ಸಾಲಿಕೇರಿ, ಸಂಘದ ಗೌರವಾಧ್ಯಕ್ಷ ಲಕ್ಷ್ಮಣ ಶೆಟ್ಟಿಗಾರ್, ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿಗಾರ್ ಬೈಕಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Articles

Back to top button
error: Content is protected !!