ಸಾಂಸ್ಕೃತಿಕ

ತಂದೆಯ ‘ಸುಪಾರಿ’ ಆರೋಪಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚೈತ್ರಾ ಕುಂದಾಪುರ ಹೇಳಿದ್ದೇನು?

Views: 147

ಕನ್ನಡ ಕರಾವಳಿ ಸುದ್ದಿ: ಚೈತ್ರಾ ಕುಂದಾಪುರ ಮೇಲೆ ತಂದೆ ಬಾಲಕೃಷ್ಣ ನಾಯ್ಕ್ ಅವರು ಸಾಲು ಸಾಲು ಆರೋಪ ಮಾಡಿದ್ದಾರೆ. ಚೈತ್ರಾ ಕುಂದಾಪುರ ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಂದೆ ಬಾಲಕೃಷ್ಣ ನಾಯ್ಕ್ ಅವರು ನೇರವಾಗಿ ನನ್ನ ಜೀವ ತೆಗೆಯಲು ಚೈತ್ರಾ ಕುಂದಾಪುರ ಸುಪಾರಿ ನೀಡಿದ್ದಾರೆ. ನನ್ನ ಆಸ್ತಿ ಹಾಗೂ ಭೂಮಿಗಾಗಿ ನನ್ನನ್ನ ಬಲಿ ಪಡೆಯಬಹುದು. ಭೂಗತ ದೊರೆಗಳ ಮೂಲಕ ಜೀವ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಆಸ್ತಿಗಾಗಿ ಹೇಯ ಕೃತ್ಯವನ್ನು ಮಾಡಬಹುದು ಎಂದು ಆರೋಪಿಸಿದ್ದಾರೆ.

ತಂದೆಯ ಈ ಆರೋಪಕ್ಕೆ ಈಗ ಚೈತ್ರಾ ಕುಂದಾಪುರ ಅವರು ಸಖತ್ ಟಾಂಗ್ ಕೊಟ್ಟಿದ್ದಾರೆ. ಸುಪಾರಿ ಆರೋಪಕ್ಕೆ ಅಡಿಕೆ ಹಿಡಿದು ಚೈತ್ರಾ ಕುಂದಾಪುರ ಅವರು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿರುವ ಅವರು ಹೀಗೆ ತೋಟದಲ್ಲಿ ಓಡಾಡುವಾಗ ಒಂದು ಅಡಿಕೆ ಸಿಕ್ಕಿತು. ಇದಕ್ಕೆ ಹಿಂದಿಯಲ್ಲಿ ‘ಸುಪಾರಿ’ ಅಂತಾರೆ. ತುಳುವಿನಲ್ಲಿ ಏನಂತಾರೆ? ಎಂದು ಪ್ರಶ್ನಿಸಿದ್ದಾರೆ.

ಚೈತ್ರಾ ಕುಂದಾಪುರ ಅವರ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಬಾಲಕೃಷ್ಣ ನಾಯ್ಕ್ ಅವರು ಸಾಲು, ಸಾಲು ಆರೋಪ ಮಾಡುತ್ತಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಅವರು ನನ್ನ ಮಗಳು ಭೂಗತ ದೊರೆಗಳಿಗೆ ಸುಪಾರಿ ನೀಡಿ ಕೊಲೆ ಮಾಡಿಸುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಡಿಕೆ ಹಿಡಿದ ಫೋಟೋ ಹಾಕುವ ಮೂಲಕ ಚೈತ್ರಾ ಕುಂದಾಪುರ ಅವರು ಟಾಂಗ್ ನೀಡಿದ್ದಾರೆ.

Related Articles

Back to top button
error: Content is protected !!