ಸಾಂಸ್ಕೃತಿಕ

ಶೀಘ್ರದಲ್ಲೇ ಚಿತ್ರರಂಗ ಪ್ರವೇಶಕ್ಕೆ ರೆಡಿಯಾದ ಉಪ್ಪಿ ಪುತ್ರ ಆಯುಷ್!

Views: 106

ಕನ್ನಡ  ಕರಾವಳಿ ಸುದ್ದಿ: ಕನ್ನಡ ಚಿತ್ರರಂಗದ ಮತ್ತೊಂದು ಸ್ಟಾರ್ ಕುಟುಂಬದ ಕುಡಿ ಬೆಳ್ಳಿತೆರೆ ಮೇಲೆ ಮಿಂಚಲು ಅಣಿಯಾಗಿದೆ.

ಉಪೇಂದ್ರ ಪ್ರಿಯಾಂಕ ಪುತ್ರ ಆಯುಷ್‌ ಹುಟ್ಟುಹಬ್ಬದ ಅಂಗವಾಗಿ ಇತ್ತೀಚೆಗಷ್ಟೇ ಇಡೀ ಕುಟುಂಬ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದೆ.ಅಪ್ಪ ಅಮ್ಮ ಇಬ್ಬರೂ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಹೀಗಾಗಿ ಅವರಿಗೆ ರಕ್ತಗತವಾಗಿ ಕಲೆ ಒಲಿದಿದೆ.

ಆಯುಷ್‌ ಉಪೇಂದ್ರ ಅವರನ್ನು ಇಂಡಸ್ಟ್ರಿಗೆ ನಿರ್ದೇಶಕ ಪುರುಷೋತ್ತಮ್ ಪರಿಚಯಿಸುತ್ತಿದ್ದಾರೆ ಎಂದು ಹೇಳಲಾಗಿದೆ.‌ ನಿರ್ದೇಶಕ ಪುರುಷೋತ್ತಮ್‌ ಈಗ ಉಪ್ಪಿ ಮಗನನ್ನು ಇಂಡಸ್ಟ್ರಿಗೆ ಲಾಂಚ್‌ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ತಾರಾ ಪತಿ ವೇಣು ಈ ಚಿತ್ರಕ್ಕೆ ಕ್ಯಾಮರಾ ಹಿಡಿಯಲಿದ್ದಾರೆ. ಕೆಲ ದಿನಗಳಲ್ಲೇ ಆಯುಷ್ ಫೋಟೋ ಶೂಟ್ ಮಾಡಲು ಸಿದ್ಧತೆ ನಡೆದಿದೆ. ಈ ಫೋಟೋಶೂಟ್ ಬಳಿಕ ಅಧಿಕೃತವಾಗಿ ಉಪೇಂದ್ರ ಕುಟುಂಬ ಮಗನ ಸಿನಿಮಾ ಎಂಟ್ರಿ ಬಗ್ಗೆ ತಿಳಿಸಲಿದೆ. ಉಪೇಂದ್ರ ಹೋಂ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ ಅನ್ನೋ ಮಾಹಿತಿ ಇದೆ.

ಅಪ್ಪ ಅಮ್ಮನ ಸಿನಿಮಾಗಳನ್ನು ನೋಡುತ್ತಾ ಬಂದಿರೋ ಆಯುಷ್ ಸಿನಿಮಾ ಹೀರೋ ಆಗಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಓರ್ವ ನಟನಿಗೆ ಬೇಕಾಗುವ ಡ್ಯಾನ್ಸ್‌, ಫೈಟ್ ಹಾಗೂ ರಂಗಭೂಮಿಯಲ್ಲಿ ಅಭಿನಯ ತರಬೇತಿ ಪಡೆದುಕೊಂಡು ಆಯುಷ್ ಇಂಡಸ್ಟ್ರಿಗೆ ಎಂಟ್ರಿ‌ ಕೊಡ್ತಾ ಇದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟರ ಮಟ್ಟಿಗೆ ಮೋಡಿ ಮಾಡ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

 

Related Articles

Back to top button
error: Content is protected !!