ಸಾಂಸ್ಕೃತಿಕ

ವಕ್ವಾಡಿ ಫ್ರೆಂಡ್ಸ್ ವಕ್ವಾಡಿ: 2ನೇ ವರ್ಷದ ಉಚಿತ ಬೇಸಿಗೆ ಶಿಬಿರ

Views: 114

ಕನ್ನಡ ಕರಾವಳಿ ಸುದ್ದಿ:  ಕುಂದಾಪುರ ತಾಲೂಕಿನ ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಇವರ ಆಶ್ರಯದಲ್ಲಿ 2ನೇ ವರ್ಷದ  ಉಚಿತ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಇದರ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರವೀರ್ ಶೆಟ್ಟಿ ಸಣ್‌ಗಲ್ ಮನೆ, ಸದಾಶಿವ ರಾವ್ ಅರೆಹೊಳೆ, ಉದಯಕುಮಾರ್ ಶೆಟ್ಟಿ ಪಟೇಲರಮನೆ, ವಕ್ವಾಡಿ ಫ್ರೆಂಡ್ಸ್‌ನ ಮಹಿಳಾ ಮಂಡಲದ ಅಧ್ಯಕ್ಷೆ ನಾಗರತ್ನ ಮೊದಲಾದವರು ಉಪಸ್ಥಿತರಿದ್ದರು.

5 ದಿನಗಳ ಕಾಲ ಮಕ್ಕಳಿಗಾಗಿ ಈ ಉಚಿತ ಬೇಸಿಗೆ ಶಿಬಿರ ನಡೆಯಲಿದ್ದು ನೃತ್ಯ, ಸಂಗೀತ, ಚಿತ್ರಕಲೆ, ಕಸೂತಿ, ಪಾರಂಪರಿಕ ಮನೆಗಳ ಭೇಟಿ, ವಾಟರ್ ಪಾರ್ಕ್ ಸಹಿತ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುವ ಕಾರ್ಯಕ್ರಮಗಳು ನಡೆಯಲಿದೆ.

ಶಿಬಿರದ ನಿರ್ದೇಶಕ ಗಿರೀಶ್ ಆಚಾರ್, ಶಿಕ್ಷಕಿಯರಾದ ಸಹನಾ, ಮತ್ತು ಸುಶೀಲಾ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಸ್ವಾಗತಿಸಿದರು, ಹರೀಶ್ ವಂದಿಸಿದರು.

Related Articles

Back to top button