ಸಾಂಸ್ಕೃತಿಕ

ಹೋಳಿ ಹಬ್ಬದ ಪಾರ್ಟಿಯಲ್ಲಿ ಲೈಂಗಿಕ ಕಿರುಕುಳ; ಸಹ ನಟನ ಮೇಲೆ ದೂರು ನೀಡಿದ ಸಹನಟಿ

Views: 97

ಕನ್ನಡ ಕರಾವಳಿ ಸುದ್ದಿ: ಮುಂಬೈ ಹೋಳಿ ಪಾರ್ಟಿಯಲ್ಲಿ ತನ್ನ ಸಹನಟ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕಿರುತರೆ ನಟಿಯೊಬ್ಬರು ಆರೋಪಿಸಿದ್ದಾರೆ.

ಮನರಂಜನಾ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿರುವ 29 ವರ್ಷದ ನಟಿ, ತನ್ನ ಸಹೋದ್ಯೋಗಿ ಕುಡಿದಿದ್ದು, ಬಲವಂತವಾಗಿ ಬಣ್ಣ ಬಳಿದಿದ್ದಾರೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಚಾನೆಲ್‌ ಅವರು ಆಯೋಜಿಸಿದ್ದ ಪಾರ್ಟಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಆರೋಪಿ ನಟ ಆಕೆಯ ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದರೂ ಸಹ ಬಲವಂತವಾಗಿ ಬಣ್ಣ ಬಳಿದಿದ್ದಾನೆ ಎಂದು ಆರೋಪಿಸಲಾಗಿದೆ.

ನಟಿಯು ಸಹ ನಟನ ವಿರುದ್ಧ ದೂರು ನೀಡಿದ್ದು, ದೂರಿನಲ್ಲಿ ತಾನು ಆತನಿಂದ ಬಚಾವ್‌ ಆಗಲು ಅಂಗಡಿಯೊಂದರ ಹಿಂದೆ ಅಡಗಿಕೊಂಡಿದ್ದೆ. ತನ್ನ ಮುಖವನ್ನು ಮುಚ್ಚಿಕೊಂಡಿದ್ದೆ ಎಂದು ಹೇಳಿದ್ದಾರೆ.

ಆತ ತನ್ನನ್ನು ಬಲವಂತವಾಗಿ ಹಿಡಿದು ಕೆನ್ನೆಗಳಿಗೆ ಬಣ್ಣ ಬಳಿದು ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಮತ್ತು ‘ನಿನ್ನನ್ನು ನನ್ನಿಂದ ಯಾರು ರಕ್ಷಿಸುತ್ತಾರೆಂದು ನೋಡೋಣ’ ಎಂದು ಹೇಳಲು ಪ್ರಾರಂಭಿಸಿದನು. ನಂತರ ಆತ ತನ್ನನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಹಾಗೂ ನನ್ನನ್ನು ತಳ್ಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪಾರ್ಟಿಯಲ್ಲಿ ಹಾಜರಿದ್ದ 30 ವರ್ಷದ ಸಹನಟ ಕುಡಿದ ಅಮಲಿನಲ್ಲಿದ್ದ ಮತ್ತು ಕಾರ್ಯಕ್ರಮದಲ್ಲಿ ತನ್ನ ಮತ್ತು ಇತರ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ನಾನು ಈ ಬಗ್ಗೆ ನನ್ನ ಸ್ನೇಹಿತರ ಬಳಿ ಹೇಳಿಕೊಂಡೆ. ನಂತರ ಅವರು ಅವನ ಬಳಿ ಮಾತನಾಡಿದಾಗ ಅವರ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ. ಈ ಘಟನೆಯಿಂದ ನಾನು ಮಾನಸಿಕವಾಗಿ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದೇನೆ ಎಂದು ನಟಿ ಹೇಳಿದ್ದಾರೆ. ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 75(1)(i) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಆರೋಪಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Related Articles

Back to top button
error: Content is protected !!