ಶಿಕ್ಷಣ
ಕುಸಿದು ಬಿದ್ದು ಶಾಲಾ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು!

Views: 171
ಕನ್ನಡ ಕರಾವಳಿ ಸುದ್ದಿ: ಸುಸ್ತಾಗಿ ಕುಸಿದು ಬಿದ್ದಿದ್ದ ಶಾಲಾ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
ಪೂರ್ವಿಕಾ (13) ಸಾವನ್ನಪ್ಪಿದ ವಿದ್ಯಾರ್ಥಿನಿ. ಪೂರ್ವಿಕಾ ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ, ಕ್ಯಾತೆ ಗ್ರಾಮದ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ. ದೊಡ್ಡಬಂಡಾರ ಗ್ರಾಮದ ಶಿವ-ಆಶಾ ದಂಪತಿ ಪುತ್ರಿ.
ಬುಧವಾರದಿಂದ ಸುಸ್ತು ಎನ್ನುತ್ತಿದ್ದ ಪೂರ್ವಿಕಾ ಗುರುವಾರ ಸಂಪೂರ್ಣ ಸುಸ್ತಾಗಿ ಕುಸಿದು ಬಿದ್ದಿದ್ದಾಳೆ. ಪೂರ್ವಿಕಾ ಸುಸ್ತಾಗಿರುವ ಬಗ್ಗೆ ಶಾಲಾ ಶಿಕ್ಷಕಕರು ಪೋಷಕರಿಗೆ ವಿಷಯ ತಿಳಿಸಿ ಕೂಡಲೇ ಕೊಡ್ಲಿಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದಾರೆ. ಕೊಡಗಿನಿಂದ ಹಾಸನಕ್ಕೆ ಬರುವಷ್ಟರಲ್ಲಿ ಪೂರ್ವಿಕಾ ಸಾವನ್ನಪ್ಪಿದ್ದಾಳೆ.
ಪೂರ್ವಿಕಾ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.