ಪೂಜೆಯ ಹೆಸರಿನಲ್ಲಿ ನಕಲಿ ಬಾಬಾ ಮಹಿಳೆಯ ಮನೆಗೆ ಮಧ್ಯರಾತ್ರಿ ತೆರಳಿ ಲೈಂಗಿಕ ದೌರ್ಜನ್ಯ!

Views: 213
ಕನ್ನಡ ಕರಾವಳಿ ಸುದ್ದಿ: ಕಾಯಿಲೆ ಗುಣ ಪಡಿಸುತ್ತೇನೆ ಎಂದು ಹೇಳಿಕೊಂಡ ನಕಲಿ ಬಾಬಾ ಇಡೀ ರಾತ್ರಿ ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ನಡೆದಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ಸೈಬರಾಬಾದ್ ಪೊಲೀಸರು ಆತನನ್ನು ಬಂಧಿಸಿದ್ದರು.
ಬಂಧಿತನನ್ನು ಅರ್ಷದ್ ಜಲಾವುದ್ದೀನ್ (45) ಎಂದು ಗುರುತಿಸಲಾಗಿದೆ.
ಕರ್ನಾಟಕ ಮೂಲದ ಅರ್ಷದ್ ಪ್ರಾರ್ಥನೆ ಮತ್ತು ಮಾಟದಿಂದ ಯಾವುದೇ ಅನಾರೋಗ್ಯವನ್ನು ಗುಣಪಡಿಸುತ್ತೇನೆ ಎಂದು ನಂಬಿಸುವ ಕೆಲಸ ಮಾಡುತ್ತಿದ್ದ. ಮಹಿಳೆಯೊಬ್ಬಳು ತನ್ನ ಮೇಲೆ ನಕಲಿ ಬಾಬಾ ಅತ್ಯಾಚಾರವೆಸಗಿದ್ದಾನೆ ಎಂದು ದೂರು ಸಲ್ಲಿಸಿದ್ದಳು. ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆ ಅನಾರೋಗ್ಯಕ್ಕೆ ಒಳಗಾಗಿದ್ದಳು. ಎಷ್ಟೇ ಚಿಕಿತ್ಸೆ ಪಡೆದರೂ ಗುಣಮುಖವಾಗಲಿಲ್ಲವಾದ್ದರಿಂದ, ಅರ್ಷದ್‌ನನ್ನು ಸಂಪರ್ಕಿಸಿ ಗುಣಮುಖ ಮಾಡಬೇಕು ಎಂದು ಕೇಳಿಕೊಂಡಿದ್ದಳು. ಅವಕಾಶ ಬಳಸಿಕೊಂಡ ನಕಲಿ ಬಾಬಾ ಪೂಜೆಯ ಹೆಸರಿನಲ್ಲಿ ಮಹಿಳೆಯ ಮನೆಗೆ ಮಧ್ಯರಾತ್ರಿ ತೆರಳಿ ಕೋಣೆಗೆ ಕರೆದೊಯ್ದು ಮಹಿಳೆಯ ಪ್ರಜ್ಞೆ ತಪ್ಪಿಸಿ ದೌರ್ಜನ್ಯ ಎಸಗಿದ್ದಾನೆ. ಬಳಿಕ ಆಕೆ ದೂರು ದಾಖಲಿಸಿದ್ದಳು.