ಯುವಜನ

ಯುವತಿ ತನ್ನ ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಪಾಗಲ್ ಪ್ರೇಮಿಯ ರಂಪಾಟ!

Views: 136

ಕನ್ನಡ ಕರಾವಳಿ ಸುದ್ದಿ: ಯುವತಿ ತನ್ನ ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಆಕೆಯ ತಂದೆಯ ಕಾಅರು, ಬೈಕ್ ಗಳನ್ನು ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ಬೆಂಗಳೂರಿನ ಚನ್ನಮ್ಮನಕೆರೆಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನಡೆದಿದೆ.

ರಾಹುಲ್ ಎಂಬ ಯುವಕ, ಯುವತಿ ಪ್ರೀತಿ ನಿರಾಕರಿಸದಳೆಂದು ಆಕೆ ವಾಸವಾಗಿರುವ ಅಪಾರ್ಟ್ ಮೆಂಟ್ ಗೆ ನುಗ್ಗಿ ಆಕೆಯ ತಂದೆಯ ಕಾರು- ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾನೆ. ತಡೆಯಲು ಬಂದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಎರಡು ಕಾರು, ಒಂದು ಬೈಕ್ ಬೆಂಕಿಗಾಹುತಿಯಾಗಿದೆ.

ಘಟನ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ರಾಹುಲ್ ನನ್ನು ಬಂಧಿಸಿದ್ದಾರೆ.

Related Articles

Back to top button
error: Content is protected !!