ಪ್ರೀತಿಸಿ ಮದುವೆಯಾದ ನವವಿವಾಹಿತೆ ಹಳ್ಳಿಯ ಜೀವನಕ್ಕೆ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ
Views: 130
ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿ ಮದುವೆಯಾದ ನವ ವಿವಾಹಿತೆ ಎರಡೇ ತಿಂಗಳಲ್ಲಿ ನೇಣಿಗೆ ಶರಣಾದ ಘಟನೆ ಕಲಬುರಗಿ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ. ಅನುಸುಯಾ ಅವಿನಾಶ್ ಆಕಡೆ (26) ಮೃತ ದುರ್ದೈವಿ.
ಅನುಸುಯಾ ತನ್ನ ಅತ್ತೆ ಮಗ ಅವಿನಾಶ್ ನನ್ನ ಪ್ರೀತಿಸಿ ಮದುವೆಯಾಗಿದ್ದಳು. ಎರಡು ತಿಂಗಳ ಹಿಂದೆ ಅನುಸುಯಾ-ಅವಿನಾಶ್ ಮದುವೆ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ನೇರವೇರಿತ್ತು. ಮದುವೆಯಾದ ಬಳಿಕ ಗಂಡನ ಜೊತೆ ಹಳ್ಳಿಯಲ್ಲಿ ಇರುವುದಕ್ಕೆ ಅನುಸುಯಾ ಬೇಸರ ಮಾಡಿಕೊಂಡಿದ್ದಳು.
ಇವತ್ತಿನ ಕಾಲದ ಬಹುತೇಕ ಹೆಣ್ಮಕ್ಕಳು ಹಳ್ಳಿಯಲ್ಲಿ ವಾಸ ಮಾಡಲು ಇಷ್ಟಪಡುತ್ತಿಲ್ಲ. ಇದೇ ಕಾರಣದಿಂದಲೇ ಅದೆಷ್ಟು ಗಂಡು ಮಕ್ಕಳಿಗೆ ಮದುವೆ ಭಾಗ್ಯ ಕೂಡ ಇಲ್ಲ. ಕಲಬುರಗಿಯಲ್ಲಿ ನಡೆದ ಈ ಪ್ರಕರಣ ದುರಂತವೇ ಸರಿ.
ಅನುಸುಯಾಳ ಮೂವರು ಸಹೋದರಿಯರು ಗಂಡನ ಜೊತೆ ಬೆಂಗಳೂರು, ಮುಂಬೈನಲ್ಲಿ ವಾಸವಾಗಿದ್ದರು. ತನ್ನ ಸಹೋದರಿಯರು ಕ್ಯಾಪಿಟಲ್ ಸಿಟಿಯಲ್ಲಿ ವಾಸ, ತಾನು ಚಿಕ್ಕ ಸಿಟಿಯ ಹಳ್ಳಿಯಲ್ಲಿ ವಾಸ ಮಾಡ್ತಿರುವುದಾಗಿ ಅನುಸುಯಾ ನೊಂದಿದ್ದಳು.
ಇದೇ ನೋವಿನಲ್ಲಿ ಅನುಸುಯಾ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






