ಅಕ್ಕ ಪ್ರೀತಿಸುತ್ತಿದ್ದ ಹುಡುಗನನ್ನೇ ಹತ್ಯೆಗೈದ ಅಪ್ರಾಪ್ತ ಬಾಲಕ
Views: 108
ಕನ್ನಡ ಕರಾವಳಿ ಸುದ್ದಿ: ಅಕ್ಕ ಪ್ರೀತಿಸುತ್ತಿದ್ದ ಹುಡುಗನನ್ನು ಅಪ್ರಾಪ್ತ ಬಾಲಕ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಡೆದಿದೆ.
ರಾಜಾಪುರ ಗ್ರಾಮದ ಮಂಜುನಾಥ ಸುಭಾಷ್ ಎಣ್ಣಿ (23) ಕೊಲೆಯಾದ ಯುವಕ.
ಕಳೆದ ಹಲವು ವರ್ಷಗಳಿಂದ ಅಪ್ರಾಪ್ತ ಬಾಲಕನ ಸಹೋದರಿಯನ್ನು ಪ್ರೀತಿಸುತ್ತಿದ್ದ ಮಂಜುನಾಥ. ಅಕ್ಕನ ಉಸಾಬರಿಗೆ ಬರಬೇಡ ಎಂದು ಹಲವು ಸಲ ಮಂಜುನಾಥಗೆ ವಾರ್ನ್ ಮಾಡಿದ್ದ. ಆದರೂ ಅಕ್ಕನ ಜೊತೆಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಮಂಜುನಾಥ್. ಸಾಲದೆಂಬಂತೆ ಆಗಾಗ ಗ್ರಾಮದಲ್ಲಿ ಪ್ರೇಯಸಿಗೆ ಭೇಟಿ ಆಗುವುದನ್ನು ಮಾಡ್ತಿದ್ದ ಮೃತ ಮಂಜುನಾಥ.
ರಾಜಾಪುರ ಗ್ರಾಮದ ಚೂನಮ್ಮ ದೇವಿಯ ಪೂಜಾರಿ ಆಗಿದ್ದ ಮಂಜುನಾಥ ಎಣ್ಣಿ. ಬೆಳಿಗ್ಗೆ ಚೂನಮ್ಮ ದೇವರ ಪೂಜೆ ಮಾಡಲು ಬಂದಾಗ ಮಂಜುನಾಥ ಕೊಲೆಗೆ ಸಂಚು ರೂಪಿಸಿದ್ದ. ದೇವಸ್ಥಾನದಲ್ಲಿ ಯಾರೂ ಇಲ್ಲದಾಗ ಮಂಜುನಾಥ ತಲೆಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದ ತೀವ್ರ ರಕ್ತಸ್ರಾವದಿಂದ ದೇವಸ್ಥಾನ ಆವರಣದಲ್ಲೇ ಪ್ರಾಣಬಿಟ್ಟಿದ್ದಾನೆ ಮಂಜುನಾಥ ಎಣ್ಣಿ.
ಸ್ಥಳಕ್ಕೆ ಘಟಪ್ರಭಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.






