ಕರಾವಳಿ

ಉತ್ತರ ಕನ್ನಡ: ನಸುಕಿನ‌ ಜಾವ ಹಣ್ಣು, ತರಕಾರಿ ತುಂಬಿದ್ದ ಲಾರಿ ಪಲ್ಟಿ: 9 ಮಂದಿ ಸಾವು

Views: 162

ಕನ್ನಡ ಕರಾವಳಿ ಸುದ್ದಿ: ತರಕಾರಿ ತುಂಬಿದ್ದ ಲಾರಿ ಪಲ್ಟಿಯಾಗಿ 9 ಜನರು ಜೀವ ಕಳೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಹದಿನೈದಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ತರಕಾರಿ ತುಂಬಿದ್ದ ಲಾರಿಯಲ್ಲಿ 25 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಲಾರಿ ಸವಣೂರಿನಿಂದ ಕುಮಟಾಗೆ ಹೊರಟಿತ್ತು. ಮೃತರೆಲ್ಲ ಸವಣೂರ ಮೂಲದವರೆಂದು ತಿಳಿದು ಬಂದಿದೆ. ನಸುಕಿನ‌ ಜಾವ ಮಂಜು ಇದ್ದ ಹಿನ್ನೆಲೆಯಲ್ಲಿ ರಸ್ತೆ ಸರಿಯಾಗಿ ಕಾಣದಿದ್ದರಿಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.

Related Articles

Back to top button