ಇತರೆ
ಮಾಜಿ ಶಾಸಕ ಯು. ಆರ್. ಸಭಾಪತಿ ವಿಧಿವಶ

Views: 0
ಉಡುಪಿ ಕ್ಷೇತ್ರದ ಮಾಜಿ ಶಾಸಕ ಯು. ಆರ್ ಸಭಾಪತಿ (71) ವಿಧಿವಶರಾಗಿದ್ದಾರೆ.
ಅಲ್ಪಕಾಲದ ಅಸೌಖ್ಯದಿಂದ ಇಂದು ಉಡುಪಿ ಬಡಗು ಪೇಟೆಯಲ್ಲಿ ನಿಧನರಾದರು. 1994 ರಲ್ಲಿ ಎಸ್. ಬಂಗಾರಪ್ಪ ನೇತೃತ್ವದ ಕನಾ೯ಟಕ ಕಾಂಗ್ರೆಸ್ ಪಕ್ಷದಿಂದ 1999 ರಲ್ಲಿ ಕಾಂಗ್ರೆಸ್ ನಿಂದ ಗೆದ್ದು ಶಾಸಕರಾಗಿದ್ದಾರೆ. ಎರಡು ಭಾರಿ ಉಡುಪಿ ಕ್ಷೇತ್ರದ ಶಾಸಕರಾಗಿ, 80-90 ದಶಕದ ಅವಧಿಯಲ್ಲಿ ಕರಾವಳಿ ಭಾಗದ ಪ್ರಭಾವಿ ನಾಯಕರಾಗಿದ್ದರು.
ಮನೋರಮಾ ಮಧ್ವರಾಜ್, ರಘಪತಿ ಭಟ್ ವಿರುದ್ಧ ಪರಾಜಯಗೊಂಡಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರರು, ಓವ೯ ಪುತ್ರಿಯನ್ನು ಅಗಲಿದ್ದಾರೆ.






