ಇತರೆ

ಕುಂದಾಪುರ : ಅಂದ‌ರ್ ಬಾಹ‌ರ್ ಇಸ್ಪೀಟ್ ಜೂಜಾಟ :7 ಮಂದಿ ಬಂಧನ,ನಗದು ಮೊಬೈಲ್,ಕಾರು ವಶಕ್ಕೆ

Views: 180

ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ವೆ ಗ್ರಾಮದ ವನಜಲ ರೆಸಿಡೆನ್ಸಿ ಕಟ್ಟಡದ ರೂಮ್‌ನಲ್ಲಿ ನಿನ್ನೆ ಸಂಜೆ ವೇಳೆ ಅಕ್ರಮವಾಗಿ ಅಂದ‌ರ್ ಬಾಹ‌ರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಏಳು ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಹರೀಶ್, ಪ್ರಕಾಶ್, ಮಂದಾರ, ಸಿದ್ದಾರ್, ನಾಗರಾಜ್, ಮುಖೇಶ್, ಚಿರಾಗ್ ಬಂಧಿತ ಆರೋಪಿಗಳು. ಬಂಧಿತರಿಂದ 13700ರೂ. ನಗದು, 7 ಮೊಬೈಲ್ ಫೋನ್‌ಗಳು ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!