ಜನಮನ

ಉಪ್ಪಿನಕುದ್ರು ಪ್ರೌಢಶಾಲಾ ಮುಖ್ಯ ಶಿಕ್ಷಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳ ಬಂಧನಕ್ಕೆ ಆಗ್ರಹ 

Views: 177

ಕನ್ನಡ ಕರಾವಳಿ ಸುದ್ದಿ: ಉಪ್ಪಿನಕುದ್ರು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಾಲತಿ ಅವರಿಗೆ ಅದೇ ಶಾಲೆಯ ಸಹ ಶಿಕ್ಷಕಿ ನಂದಾ ಎನ್.ವಿ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಉಮೇಶ್ ಶೇರುಗಾರ್ ನಿರಂತರ ಕಿರುಕುಳ ನೀಡಿದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯದಡಿ ಕೇಸು ದಾಖಲಾಗಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಬೇಕು ದೌರ್ಜನ್ಯಕ್ಕೊಳಗಾದ ದಲಿತ ಮುಖ್ಯ ಶಿಕ್ಷಕಿಗೆ ಸಾಂತ್ವನ ಹೇಳಿ ರಕ್ಷಣೆ ನೀಡುವುದನ್ನು ಬಿಟ್ಟು ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಬಳಸಿಕೊಂಡು ಯಾವುದೇ ಇಲಾಖೆ ಮಟ್ಟದಲ್ಲಿ ತನಿಖೆ ಮಾಡದೆ ಶಿಕ್ಷಕಿಯ ಮೇಲೆ ಸುಳ್ಳು ಪ್ರತಿ ದೂರ ನೀಡಿ ಮಾನಸಿಕವಾಗಿ ಕುಗ್ಗಿಸುವುದನ್ನು ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ಮೂಲಕ ತಾಲೂಕು ಸಂಘಟನಾ ಸಂಚಾಲಕ ಕೆ ಎಸ್ ವಿಜಯ್ ಖಂಡಿಸಿದ್ದಾರೆ.

Related Articles

Back to top button
error: Content is protected !!