ಇತರೆ

ಕುಂದಾಪುರ: ಅಂಪಾರಿನಲ್ಲಿ  ಬೈಕ್‌ ಸ್ಕಿಡ್‌ ಆಗಿ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Views: 276

ಕುಂದಾಪುರ:ಅಂಪಾರು ಗ್ರಾಮದ ತಲಕಲ್‌ಗ‌ುಡ್ಡೆಯ ರಾಜ್ಯ ಹೆದ್ದಾರಿಯಲ್ಲಿ ಬೈಕ್‌ ಸ್ಕಿಡ್‌ ಆಗಿ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು.ಅವರು ನ. 26ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಹೆಬ್ರಿಯ ನೆಲ್ಲಿಕಟ್ಟೆಯ ಮನೋಜ್‌ (48) ಅವರು ತಮ್ಮ ಬೈಕಿನಲ್ಲಿ ಜಡ್ಕಲ್‌ ಕಡೆಗೆ ನ. 24ರಂದು ಬರುತ್ತಿರುವಾಗ ಅಂಪಾರು ಗ್ರಾಮದ ತಲಕಲ್‌ಗ‌ುಡ್ಡೆ ಎನ್ನುವಲ್ಲಿ ರಾಜ್ಯ ಹೆದ್ದಾರಿಯಲ್ಲಿ ಬೈಕ್‌ ಸ್ಕಿಡ್‌ ಆಗಿ ಬಿದ್ದಿದ್ದು, ತಲೆಗೆ ಗಂಭೀರವಾದ ಗಾಯವಾಗಿತ್ತು. ಕೂಡಲೇ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಜಡ್ಕಲ್‌ ಗ್ರಾಮದ ಕೆ.ಕೆ. ಸಾಜು ಅವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!