ಇತರೆ

ಅತ್ತೆ-ಸೊಸೆ ಜಗಳದಿಂದ ಬೇಸತ್ತು ವ್ಯಕ್ತಿಯೊಬ್ಬ  ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Views: 50

ಕನ್ನಡ ಕರಾವಳಿ ಸುದ್ದಿ: ವ್ಯಕ್ತಿಯೋರ್ವ ತನಗೆ ತಾನೇ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಚೀಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕರುಣಾಕರ (40) ಆತ್ಮಹತ್ಯೆಗೆ ಶರಣಾದವರು. ಕರುಣಾಕರ ಕಾಫಿ ಬೆಳೆಗಾರರಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಆದರೆ ಪತ್ನಿ ಹಾಗೂ ಕರುಣಾಕರನ ತಾಯಿ ನಡುವೆ ಜಗಳವಾಗುತ್ತಿತ್ತಂತೆ. ಅತ್ತೆ-ಸೊಸೆ ಜಗಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button