ಇತರೆ

ಎಲೆಕ್ಟ್ರಿಕ್ ಶೋರೂಂ ನಲ್ಲಿ ಬೆಂಕಿ ಅವಘಡ: ಯುವತಿ ಸಜೀವದಹನ

Views: 227

ಕನ್ನಡ ಕರಾವಳಿ ಸುದ್ದಿ: ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಯುವತಿಯೊಬ್ಬರು ಸಜೀವದಹನವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ರಾಜ್ ಕುಮರ್ ರಸ್ತೆಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಂ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಯಲ್ಲಿ ಶೋ ರೂಂ ಹೊತ್ತಿ ಉರಿದಿದೆ. ಈ ವೇಳೆ ಶೋರೂಂ ಒಳಗೆ ಸಿಲುಕಿದ್ದ ಯುವತಿ ಹೊರಬರಲಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸೇಲ್ಸ್ ಗರ್ಲ್ ಆಗಿದ್ದ ಪ್ರಿಯಾ ಮೃತ ಯುವತಿ. ಶೂರೂಂ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ದುರಂತ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ವ್ಯಾಪಿಸಿದ್ದು, 25 ಬೈಕ್ ಗಳು ಸುಟ್ಟು ಕರಕಲಾಗಿವೆ. ಶೋ ರೂಂ ಒಳಗೆ ಸಿಲುಕಿದ್ದ ಯುವತಿ ಕೂಡ ಸಜೀವದಹನವಾಗಿದ್ದಾರೆ.

ಯುವತಿ ತಂದೆಯ ಆಕ್ರಂದನ : ತನ್ನ ಮಗಳು ಬೆಂಕಿಗಾಹುತಿಯಾದ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾ ತಂದೆ ಆರ್ಮುಗಂ, ನ. 20ರಂದು ನನ್ನ ಮಗಳ ಹುಟ್ಟುಹಬ್ಬವಿತ್ತು. ಅವಳಿಗೆ ಬಟ್ಟೆ ತರಿಸಿಟ್ಟಿದ್ದೇನೆ. ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹೋಗಿದ್ದಳು. ಪ್ರತಿದಿನ 7.30 ರೊಳಗೆ ಮನೆಯಲ್ಲಿರುತ್ತಿದ್ದಳು. ನನ್ನ ಮಗಳು ಇದೇ ಶೋ ರೂಂನಲ್ಲಿ ಕಳೆದ 3 ವರ್ಷಗಳಿಂದ ಕೆಲಸ ಮಾಡುತ್ತಿದ್ದಾಳೆ. ನನ್ನ ಸ್ನೇಹಿತ ಶೋ ರೂಂ ಬಳಿ ಬರಲು ತಿಳಿಸಿದ್ದ. ಬಂದಾಗಲೇ ವಿಷಯ ಗೊತ್ತಾಗಿದೆ. ನನ್ನ ಮಗಳು ಎಲ್ಲಿದ್ದಾಳೆ? ಎಂದು ಕಣ್ಣೀರಿಟ್ಟಿದ್ದಾರೆ.

 

Related Articles

Back to top button
error: Content is protected !!