ಕರಾವಳಿ

ಮಂಗಳೂರು: ಸೇತುವೆ ಮೇಲಿನಿಂದ 2 ವರ್ಷದ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನ; ಸ್ಥಳೀಯರಿಂದ ರಕ್ಷಣೆ

Views: 253

ಮಂಗಳೂರು : ಇಲ್ಲಿನ ಗುರುಪುರ ಸೇತುವೆ ಮೇಲಿಂದ ವ್ಯಕ್ತಿಯೊಬ್ಬ 2 ವರ್ಷದ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಕೈಕಂಬ ನಿವಾಸಿ ಸಂದೀಪ್ ಎಂದು ಗುರುತಿಸಲಾಗಿದೆ. ಸೇತುವೆಯ ತುದಿಭಾಗದಲ್ಲಿ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದು ವಾಹನ ಸವಾರರು ತಡೆಹಿಡಿದು ರಕ್ಷಿಸಿ ಥಳಿಸಿದ್ದಾರೆ.

ಮೊದಲಿಗೆ ಸ್ಥಳೀಯರು ಸಂದೀಪ್‌ನ ಮನವೊಲಿಸುವ ಪ್ರಯತ್ನ ಮಾಡಿದ್ದಾಗ ಅವನು ಯಾರನ್ನೂ ಸಮೀಪಕ್ಕೆ ಬಿಟ್ಟುಕೊಂಡಿಲ್ಲ. ಈ ವೇಳೆ ಅವನು ನದಿಗೆ ಹಾರಿದ್ದೇ ಆದಲ್ಲಿ ರಕ್ಷಣೆ ಮಾಡಲು ಸಹ ಕೆಲ ಯುವಕರು ಸಿದ್ದರಾಗಿ ನಿಂತಿದ್ದರು

ಆದರೂ, ಕೊನೆಗೆ ನದಿಗೆ ಹಾರಲು ಸಂದೀಪ್ ಯತ್ನಿಸಿದಾತ ಆಯತಪ್ಪಿ ಸೇತುವೆಯ ಮೇಲೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಹಿಡಿದು ಮಗುವನ್ನ ರಕ್ಷಣೆ ಮಾಡಿ ಆತ್ಮಹತ್ಯೆ ಮಾಡಲು ಮುಂದಾದವನಿಗೆ ಯುವಕರು ಎರಡೇಟು ನೀಡಿ ಬುದ್ದಿ ಕಲಿಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button