ಇತರೆ

ಬಿಸಿ ಚಹಾ ಮೈಮೇಲೆ ಬಿದ್ದು 2 ವರ್ಷದ ಕಂದಮ್ಮ ಸಾವು

Views: 171

ಕನ್ನಡ ಕರಾವಳಿ ಸುದ್ದಿ: ಬಿಸಿ ಚಹಾ ಮೈಮೇಲೆ ಬಿದ್ದು 2 ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿರಿಮನೆ ಗ್ರಾಮದಲ್ಲಿ ನಡೆದಿದೆ.

ರಾಜೇಶ್ ಹಾಗೂ ಅಶ್ವಿನಿ ದಂಪತಿ ಮಗ 2 ವರ್ಷದ ಅಥರ್ವ ಮೃತ ಮಗು. ಕಳೆದ ವಾರ ರಾಜೇಶ್ ಅವರ ಪಕ್ಕದ ಮನೆಯಲ್ಲಿ ಸಾವು ಸಂಭವಿಸಿತ್ತು. ಸಾವನ್ನಪ್ಪಿದವರ ಅಂತಿಮ ದರ್ಶನಕ್ಕೆ ಬಂದಿದ್ದ ಸಂಬಂಧಿಕರಿಗೆ ಚಹಾ ಮಾಡಲು ಅಶ್ವಿನಿ ಮುಂದಾಗಿದ್ದರು. ಈ ವೇಳೆ ಟೀ ಪಾತ್ರೆ ಮೈಮೇಲೆ ಬಿದ್ದು, ಮಗ ಅಥರ್ವ ಗಂಭೀರವಾಗಿ ಗಾಯಗೊಂಡಿದ್ದ.

ಗಾಯಾಳು ಮಗುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಗು ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Related Articles

Back to top button
error: Content is protected !!