ಇತರೆ

ಕಾಲುವೆಗೆ ಬಟ್ಟೆ ತೊಳೆಯಲು ಹೋದ ತಾಯಿ-ಮಗಳು ನೀರು ಪಾಲು 

Views: 31

ಕಾಲುವೆಯಲ್ಲಿ ತಾಯಿ, ಮಗಳು ಕೊಚ್ಚಿ ಹೋದ ಘಟನೆ ರಾಯಚೂರು ತಾಲೂಕಿನ ಗ್ರಾಮದಲ್ಲಿ ನಡೆದಿದೆ.

ತಾಯಿ ಸುಜಾತ (27) ಮಗಳು ಶ್ರಾವಣಿ (10) ಮೃತರು. ತಾಯಿ, ಮಗಳಿಬ್ಬರು ಬಟ್ಟೆ ತೊಳೆಯಲೆಂದು ತುಂಗಭದ್ರಾ ಎಡದಂಡೆ ಕಾಲುವೆಗೆ ತೆರಳಿದ್ದರು. ಈ ವೇಳೆ ನೀರಿನ ರಭಸಕ್ಕೆ ಇಬ್ಬರು ಕೊಚ್ಚಿ ಹೋಗಿದ್ದಾರೆ

ಘಟನೆಗೆ ಸಂಬಂಧಿಸಿ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತಾಯಿ, ಮಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ತಾಯಿಯ ಶವ ಪತ್ತೆಯಾಗಿದ್ದು, ಪುತ್ರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Related Articles

Back to top button
error: Content is protected !!