ಜನಮನ

ಕಾಳಿಂಗ ಸರ್ಪದ ಹೆಡೆಯನ್ನೇ ಬಾಯಲ್ಲಿ ಕಚ್ಚಿಕೊಂಡು ರೀಲ್ಸ್ ಮಾಡೋ ಹುಚ್ಚಾಟ..ಯುವಕ ಏನಾದ.!

Views: 223

ಹೈದರಾಬಾದ್: ಹಾವು ಹಿಡಿಯುವುದು, ರಕ್ಷಿಸುವುದು ನಿಜಕ್ಕೂ ಒಳ್ಳೆಯ ಕಾರ್ಯವೇ, ಆದರೆ ಅದೇ ವಿದ್ಯೆಯನ್ನು ಸಾಹಸಗಳಿಗೆ ಬಳಸಿಕೊಳ್ಳುವುದು ಕೊಂಚ ಅಪಾಯಕಾರಿ. ಅದಕ್ಕೆ ದೊಡ್ಡ ಉದಾಹರಣೆಯಂತೆ ತೆಲಂಗಾಣದಲ್ಲಿ 22 ವರ್ಷದ ಶಿವಾ ರಾಜುಲು ಎಂಬ ಯುವಕನಿಗೆ ಸರ್ಪಗಳ ಸ್ನೇಹ.. ಹಾವು ಹಿಡಿಯುವುದರಲ್ಲಿ ಇವನ ತಂದೆ ಪಂಟರ್. ಹೀಗೆ ಅವನ ತಂದೆ ಹಿಡಿದ ಕಾಳಿಂಗ ಸರ್ಪವೊಂದನ್ನು ಮಗನಿಗೆ ನೀಡಿ ರೀಲ್ಸ್ ಮಾಡಲು ಹೇಳಿದ್ದಾನೆ.

ತಂದೆಯ ವಿದ್ಯೆಯೂ ಅಲ್ಪಸ್ಪಲ್ಪ ಕಲಿತ್ತಿದ್ದ ಶಿವನಿಗೆ ಸರ್ಪಳನ್ನು ಹೇಗೆ ನಿಭಾಯಿಸಬೇಕು ಎಂಬುದು ಗೊತ್ತಿತ್ತು. ಈ ಅಲ್ಪ ವಿದ್ಯೆ ಹಾಗೂ ತಂದೆಯ ಪ್ರೋತ್ಸಾಹ ಅವನನ್ನು ಸಾವಿನೊಂದಿಗೆ ಸರಸಕ್ಕಿಳಿಯುವಂತೆ ಮಾಡಿತ್ತು. ಇಡೀ ಕಾಳಿಂಗ ಸರ್ಪದ ಹೆಡೆಯನ್ನು ಬಾಯಲ್ಲಿಟ್ಟುಕೊಂಡು ವಿಡಿಯೋ ಮಾಡಿ ಸಾಹಸ ಪ್ರದರ್ಶನಕ್ಕೆ ಇಳಿದಿದ್ದ ಶಿವ. ಈ ಸಾಹಸ ಸಾವಾಗಿ ಅವನಿಗೆ ಕಾಡಿತ್ತು. ಈ ಸಾಹಸದ ಸಮಯದಲ್ಲಿ ಕಾಳಿಂಗ ಸರ್ಪ ಶಿವನನ್ನು ಕಚ್ಚಿದೆ. ಕಚ್ಚಿದ ಕೆಲವೇ ಕ್ಷಣಗಳಲ್ಲಿ ಶಿವ ಪ್ರಜ್ಞೆಯನ್ನು ಕಳೆದುಕೊಂಡು ಬಿದ್ದಿದ್ದಾನೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ, ಕಾಲ ಮಿಂಚಿ ಹೋಗಿತ್ತು.

ಆಸ್ಪತ್ರೆಯಲ್ಲಿ ಶಿವನು ಮರಣ ಹೊಂದಿರುವುದಾಗಿ ಸ್ಪಷ್ಟಿಕರಿಸಿದ್ದಾರೆ. ಕೂಡಲೇ ಬಾಣಸವಾಡಿ ಆಸ್ಪತ್ರೆಗೆ ಅವನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅತಿಯಾದ ಆತ್ಮವಿಶ್ವಾಸದ ಜೊತೆ ಜೊತೆಗೆ ಅಲ್ಪ ವಿದ್ಯೆ ಶಿವನನ್ನು ಸಾವಿನಕೂಪಕ್ಕೆ ತಳ್ಳಿದೆ.

Related Articles

Back to top button
error: Content is protected !!