“ಮಾನವೀಯತೆಯೇ ವಿಶ್ವ ಅನುಸರಿಸುವ ಮಾರ್ಗ” – ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್
ಶಿಕ್ಷಕ ದಿನಾಚರಣೆ ಪ್ರಯುಕ್ತ ವಿಶೇಷ ಲೇಖನ --ಜಯಶೀಲ ಶೆಟ್ಟಿ, ಕಂದಾವರ- ಬಳ್ಕೂರು, ಮುಖ್ಯ ಶಿಕ್ಷಕರು ಬ್ಯಾರಿಸ್ ಅನುದಾನಿತ ಪ್ರೌಢಶಾಲೆ ಕೋಡಿ, ಕುಂದಾಪುರ

Views: 546
ಕುಂದಾಪುರ: “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸ್ವತ್ತಾಗದೇ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಅಜನ್ಮಸಿದ್ದ ಹಕ್ಕಾಗಬೇಕು”. ಈ ಮಾತನ್ನು ಸರ್ ಎಂ. ವಿ. ಅವರು ಏಕೀಕೃತ ಕರ್ನಾಟಕದ ರಚನೆ ಮತ್ತು ಕನ್ನಡ ಭಾಷೆ ಹಾಗೂ ಸಾಹಿತ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಉಂಟಾಗಿದ್ದ ಒಲವನ್ನು ಮನಗಂಡು ”ಕನ್ನಡ ಭಾಷೆ ಪರಿಷತ್ತ”ನ್ನು ಹಾಗೂ ಮೈಸೂರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಯಾದ ಸುಸಂದರ್ಭದಲ್ಲಿ ತನ್ನ ದೂರ ದೃಷ್ಠಿಯ ಫಲಶ್ರುತಿಯೊಂದಿಗೆ ಆಡಿದ ಮಾತು. ಈ ಮಾತಿನೊಂದಿಗೆ ವಿಶ್ವೇಶ್ವರಯ್ಯನವರು ಅಂದು ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೆ ಪರಮೋಚ್ಚ ಪರಿಹಾರ ಹಾಗೂ ಶಿಕ್ಷಣವು ಸಂಜೀವಿನಿ ಎಂದು ನಂಬಿ ಅಂದೇ ಶಿಕ್ಷಣ ಕ್ಷೇತ್ರಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿದರು. ಮೇಲ್ಕಾಣಿಸಿದ ಪ್ರತಿಯೊಂದು ಅಕ್ಷರವೂ ಇಂದು “ಶಾಲಾ ಶಿಕ್ಷಣ ಇಲಾಖೆ” ರಾಜ್ಯ ಪಠ್ಯಕ್ರಮದ 10ನೇ ತರಗತಿಯ ಪ್ರತಿಯೋಬ್ಬ ವಿದ್ಯಾರ್ಥಿಯೂ ಸಿರಿಕನ್ನಡ ಪ್ರಥಮ ಭಾಷಾ ಪಠ್ಯಕ್ರಮದ ಮೂಲಕ ಮೇಲ್ಕಾಣಿಸಿದ ವಾಕ್ಯದ ಅಂತರಾಳವನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ.
“ಶಿಕ್ಷಣಕ್ಕಾಗಿ ಶಿಕ್ಷಣವೆಂಬ ವಾಕ್ಯವನ್ನು ಅರ್ಥೈಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅವರು ಮುಂದುವರಿದು ಇದು ಕೆಲವೇ ಜನರ ಸ್ವತ್ತಾಗದೇ ಎನ್ನುವ ವಾಕ್ಯವಂತು ಇಂದಿನ ಜ್ವಲಂತ ಸಮಸ್ಯೆಯನ್ನು ಸರ್ ಎಂ. ವಿಶ್ವೇಶ್ವರಯ್ಯನವರು ಅಂದೇ ತಿಳಿಸಿದಂತಿದೆ. ಸ್ವಾತಂತ್ರ್ಯ ಪೂರ್ವ ಅಂದರೆ1916 ರ ವೇಳೆಗೆ ಸರ್ ಅವರು ಹೇಳಿದ ಆ ಮಾತು ಇಂದು ನಮ್ಮ ಸಂವಿದಾನದ ಆಶಯಗಳನ್ನು ನೆನಪಿಸುತ್ತದೆ. ಇಂದು ಶಿಕ್ಷಣ ಕ್ಷೇತ್ರವನ್ನು ಬಹುವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಯಂತ್ರಿಸುತ್ತವೆ. ಸ್ವಾತಂತ್ರ ನಂತರ ನಮ್ಮ ದೇಶದಲ್ಲಿ 4 ಶಿಕ್ಷಣ ನೀತಿಗಳು ಸಾಕಾರಗೊಂಡಿದ್ದು, ಎಲ್ಲಾ ನೀತಿಗಳನ್ನು ಸ್ವಯಂ ಕೇಂದ್ರ ಸರಕಾರವೇ ಪ್ರಕಟಿಸಿದ್ದು ಅದರಂತೆ ರಾಷ್ಟಿçÃಯ ಶಿಕ್ಷಣ ನೀತಿ – 2020 ನ್ನು ಜುಲೈ 29 2020 ರಂದು ದೇಶದ ಪ್ರಧಾನಿ ಶಾಸನಬದ್ಧವಾಗಿ ಪ್ರಕಟಿಸಿರುವುದು ಇತಿಹಾಸ. ಅಲ್ಲದೇ ಈ ನೀತಿಯನ್ನು ರೂಪಿಸಲು ಭಾರತದ ಮಾತೆಯ ಹೆಮ್ಮೆಯ ಪುತ್ರ ಡಾ. ಕಸ್ತೂರಿ ರಂಗನ್ ಅವರ ನೇತೃತ್ವಕ್ಕೆ ವಹಿಸಿದ್ದು, ಮಾನ್ಯರು ವಿಶ್ವ ಅಧ್ಯಯನದ ವರದಿಯನ್ನು ಬಳಸಿಕೊಂಡು ನಿರಂತರ 6 ವರ್ಷಗಳ ಜನ ಸಾಮಾನ್ಯರ, ಶಿಕ್ಷಣತಜ್ಞರ, ಪೋಷಕರ ಅಭಿಪ್ರಾಯದೊಂದಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಕ್ಷೇತ್ರವನ್ನು 4 ಹಂತಗಳಾಗಿ ( 5+3+3+4) ಮರುವಿನ್ಯಾಸಗೊಳಿಸಿರುವುದು ಸ್ವಾಗತಾರ್ಹ ವಿಚಾರ.
ಮಗುವಿನ ಬಾಲ್ಯಾವಸ್ಥೆಯಿಂದ ಬುನಾದಿ ಸಾಮರ್ಥ್ಯದ ಜೊತೆಗೆ ಪ್ರತಿ ಹಂತದಲ್ಲೂ ಪ್ರಾರಂಭಿಕ 15 ವರ್ಷಗಳ ಶಿಕ್ಷಣವನ್ನು ಪಡೆಯುವ ಪ್ರತಿಯೊಂದು ಮಗು ಮುಂದಿನ ತನ್ನ ಬದುಕಿನಲ್ಲಿ ಈ ದೇಶದ ಮಾನವ ಸಂಪತ್ತಾಗಿ ತನ್ನ ಉದ್ಯೋಗವನ್ನು ತಾನೇ ನಿರ್ವಹಿಸುವ ಮಟ್ಟಕ್ಕೆ ಕೊಂಡೊಯ್ಯುವ ಶಿಕ್ಷಣ ವ್ಯವಸ್ಥೆ ನಮ್ಮ ದೇಶಕ್ಕೆ ಬೇಕಾಗಿದೆ. ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿ – 2020 ಸಂಪನ್ನಗೊಳಿಸುವಲ್ಲಿ ಸನ್ನದ್ಧವಾಗಿರುವ ವಿಚಾರವನ್ನು ಸಮಸ್ತ ನಾಗರಿಕರು ಶಿಕ್ಷಣ ಇಲಾಖೆಗಳ ಮೂಲಕ ತಿಳಿದುಕೊಳ್ಳಬೇಕಾಗಿದೆ. ಇಡೀ ದೇಶದಲ್ಲಿ 4ನೇ ವರ್ಷದ ವರ್ಷಾಚರಣೆಯುವ ಮುಗಿಸಿರುವ ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – 2020ಯು ಇನ್ನಷ್ಟು ಸಮೃಧ್ಧವಾಗಿ ಮುನ್ನಡೆಯಲು ಸಮರ್ಥ ಶಿಕ್ಷಕರ ಪಡೆಯ ಅವಶ್ಯಕತೆಯನ್ನು ರಾಷ್ಟಿçÃಯ ಶಿಕ್ಷಣ ನೀತಿ – 2020 ಬಲವಾಗಿ ಪ್ರಕಟಿಸುತ್ತದೆ. ಅಲ್ಲದೇ ಈ ದೇಶದ ಪ್ರತಿ ರಾಜ್ಯದ ನಾಡು, ನುಡಿ, ಸಂಸ್ಕೃತಿ ಹಾಗೂ ಸ್ಥಳೀಯ ಭಾಷೆಗಳಿಗೆ ಹೆಚ್ಚಿನ ಪ್ರಾಧ್ಯಾನ್ಯತೆಯನ್ನು ನೀಡುವುದರೊಂದಿಗೆ ಮಗುವೊಂದು ತನಗೆ 8 ವರ್ಷ ದಾಟುವುದರೊಳಗೆ ತನ್ನ ಬುದ್ಧಿಮತ್ತೆಗೆ ಅನುಗುಣವಾಗಿ ಶೇಕಡಾ 85% ರಷ್ಟು ತನ್ನ ವರ್ತನೆಯಲ್ಲಿನ ಪರಿವರ್ತನೆಯನ್ನು ತಂದುಕೊಡಲು ಸಮರ್ಥವಾಗಿದೆ ಎಂಬ ಅಂಶವನ್ನು ವಿಶ್ವ ಅಧ್ಯಯನದ ವರದಿಯ ಪ್ರಕಾರ ವಿವಿಧ ದೇಶಗಳ ಉದಾಹರಣೆಯೊಂದಿಗೆ ಸಮರ್ಥಿಸಿಕೊಳ್ಳುತ್ತದೆ. (ಉದಾ: ಜಪಾನ್, ಫಿನ್‌ಲ್ಯಾಂಡ್ ಇಂಗ್ಲೆಂಡ್ ಅನ್ನು ಬಿಟ್ಟು ಉಳಿದೆಲ್ಲಾ ಯೂರೋಪಿನ ದೇಶಗಳು) ನೀತಿಯು ಪ್ರತಿ ಮಗುವಿಗೆ ತನ್ನ ಮಾತೃಭಾಷೆಯೇ ಶಿಕ್ಷಣದ ಮಾಧ್ಯಮವಾಗಿ 5ನೇ ತರಗತಿಯವರೆಗೆ ವ್ಯಾಸಂಗಕ್ಕೆ ಅವಕಾಶ ಕಲ್ಪಸಿದೆ. ಇತರ ಭಾಷೆಗಳು ೬ನೇ ತರಗತಿಯ ನಂತರ ವಿನಿಮಯದ ಭಾಷೆಯಾಗಿ ಮಗುವಿಗೆ ದೊರೆಯಲಿದೆ ಎನ್ನುವುದನ್ನು 2020 ರ ಶಿಕ್ಷಣ ನೀತಿ ತಿಳಿಸುತ್ತದೆ.
ಶಿಕ್ಷಣತಜ್ಞ, ಶಿಕ್ಷಕರ ಕಣ್ಮಣಿ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ರವರ ನೆನಪು ಈ ದಿನ ಭಾವನಾತ್ಮಕ ಸಂಬಂಧಕ್ಕೆ ಹಿಡಿದ ಕೈಗನ್ನಡಿ. ಅವರು ಹಿಂದೂ ಧರ್ಮದ ತತ್ವಶಾಸ್ತçವನ್ನು ಅಧ್ಯಯನ ಮಾಡಿದವರು. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಮೆಚ್ಚಿಕೊಂಡವರು. “ಹಿಂದೂ ಧರ್ಮವು ಒಂದು ವೈಚಾರಿಕ ಜೀವನ ಮಾರ್ಗವೆಂದು, ನೈತಿಕ ಗುಣಾತ್ಮಕ ವಿಷಯಗಳಿಂದ ಕೂಡಿದ್ದು, ಮಾನವನ ಆಂತರಿಕ ಜೀವನದ ಬಗ್ಗೆ ಪ್ರಾಮುಖ್ಯತೆಯುಳ್ಳದ್ದಾಗಿದೆ. ಹಿಂದೂ ಧರ್ಮವಾಗಲೀ, ವಿಶ್ವದ ಯಾವುದೇ ಇನ್ನಿತರ ಧರ್ಮವಾಗಲೀ ಅಸತ್ಯವನ್ನು ಹೇಳುವುದಿಲ್ಲ ಎನ್ನುವ ನಿಗೂಢ ಪರಿಕಲ್ಪನೆಯನ್ನು ಜೀವನದ ನಾಡಿ ಮೀಡಿತಗಳನ್ನು ತನ್ನ ಚಿಂತನೆಗಳ ಮೂಲಕ ತಿಳಿಯಪಡಿಸಿದ್ದಾರೆ. ಇನ್ನು ಮುಂದುವರಿದು ಶಿಕ್ಷಣದ ಮಹತ್ವವನ್ನು ಮನಗಂಡ ಇವರು “ಶಿಕ್ಷಣದ ಜೀವನದ ಅವಿಭಾಜ್ಯ ಅಂಗ. ಅದು ಮಾನವನನ್ನು ಸುಸಂಸ್ಕೃತಿಯತ್ತ ಒಯ್ಯುವ ಸಾಧನ ಮಾರ್ಗ” ಎಂದು ಕೆನಡಾ ದೇಶದಲ್ಲಿ ರೇಡಿಯೋ ಪ್ರಸಾರ ಭಾಷಣದಲ್ಲಿ “ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ಎಂದು ತನ್ನ ನಿಲುವನ್ನ ವ್ಯಕ್ತಪಡಿಸಿದ್ದರು. ಇಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳು ನೀಡಿರುವ ಹೇಳಿಕೆಗಳನ್ನು ಗಮನಿಸುವಾಗ ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಮಾನವೀಯತೆ ಮತ್ತು ನೈತಿಕತೆಯ ಮೌಲ್ಯಗಳ ಅವಶ್ಯಕತೆ ಇಂದಿನ ಯುವ ಜನಾಂಗಕ್ಕೆ ಒತ್ತಿ ಹೇಳುತ್ತದೆ”.
ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿ -2020 ತರಗತಿ ಕೋಣೆಯಲ್ಲಿ ವಿಷಯ ಬೋಧನೆಯ ಜೊತೆಗೆ ಪೂರಕ ಪರಿಕರಗಳೊಂದಿಗೆ ಪ್ರಸ್ತುತ ವಾಸ್ತವಿಕತೆಯ ಜ್ವಲಂತ ವಿಚಾರಗಳನ್ನು ಸಾಧಾರಪಡಿಸಿ ಮಕ್ಕಳಲ್ಲಿ ಶಾಶ್ವತ ಹಾಗೂ ಸಂತಸದಾಯಕ ಕಲಿಕೆಯನ್ನುಂಟು ಮಾಡಿ ತನ್ಮೂಲಕ ಅವರ ವರ್ತನೆಯನ್ನು ಪರಿವರ್ತನೆಗೊಳಿಸಿ ಪರಿವರ್ತನೆಗೊಂಡ ವಿಚಾರಧಾರೆಗಳನ್ನು ಮನಗಂಡು ಅವರ ಮುಂದಿನ ಜೀವನಕ್ಕೆ ಅನ್ವಯಗೊಳಿಸುವ ತನ್ಮೂಲಕ ತನ್ನ ಜೀವನಕ್ಕೆ ತಾನೇ ಉದ್ಯೋಗದಾತನಾಗಿ ನಿರ್ಮಿಸಿಕೊಳ್ಳುವ ದೂರದೃಷ್ಠಿಯ ಫಲಶ್ರುತಿಯನ್ನು ಹೊಂದಿದ್ದು, 2047 ರ ಹೊತ್ತಿಗೆ ನಿರುದ್ಯೋಗ ಮುಕ್ತ ಭಾರತದ ಕಲ್ಪನೆಯೊಂದಿಗೆ ರಾಮರಾಜ್ಯ ಅಂದರೆ ಪ್ರಜಾಪ್ರಭುತ್ವದಲ್ಲಿ ಕಲ್ಯಾಣ ರಾಜ್ಯವನ್ನಾಗಿ ರೂಪಿಸುವ ಗುರಿಯನ್ನು ಹೊಂದಿರುವ ಹೊಸ ಶಿಕ್ಷಣ ನೀತಿಯನ್ನು ಈ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನೂ ಪ್ರೋತ್ಸಾಹಿಸಬೇಕಾಗಿದೆ. ಸರ್ ಎಂ. ವಿಶ್ವೇಶ್ವರಯ್ಯನವರು ಆ ಕಾರಣದಿಂದಲ್ಲೇ “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು ಅದು ಕೆಲವೇ ಜನರ ಸ್ವತ್ತಾಗಬಾರದು. ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಅದು ಅಜನ್ಮಸಿದ್ದ ಹಕ್ಕಾಗಬೇಕು” ಎಂಬ ಹೇಳಿದ ಅಂಶವನ್ನು ಪರಾಮರ್ಶೆ ಮಾಡಿದಾಗ ಇಂದಿನ ಸ್ಥಿತಿಯೊಂದಿಗೆ ತುಲನಾತ್ಮಕವಾಗಿ ನೋಡಿದಾಗ ನಮ್ಮ ಸಂವಿಧಾನ ಅವಕಾಶ ನೀಡಿದ ವಿವಿಧ ಪಕ್ಷಗಳು, ತನ್ನ ಪಕ್ಷದ ಆಧಾರದಲ್ಲಿ ಶಿಕ್ಷಣವನ್ನು ತನ್ನ ಪ್ರಣಾಳಿಕೆಯ ಮೂಲಕ ನಿಯಂತ್ರಿಸುವ ಇಂದಿನ ಸ್ಥಿತಿಗತಿ ಆ ಮಹಾ 2 ಆತ್ಮಗಳಿಗೆ ರುಚಿಸದು. ಅದಕ್ಕಾಗಿಯೇ ಅವರು ಅದು ಕೆಲವೇ ಜನರ ಸ್ವತ್ತಾಗಬಾರದು ಎಂದು ಅಂದೇ ನುಡಿದಿದ್ದಾರೆ.
ಅದು ಏನೇ ಇರಲಿ ಇಂದು ರಾಷ್ಟೃದ ಎಲ್ಲೆಡೆ ರಾಧಕೃಷ್ಣನ್ ಅವರ ಹುಟ್ಟುಹಬ್ಬದ ಆಚರಣೆಯನ್ನ ಆಚರಿಸುತ್ತಿದ್ದೇವೆ. ಶಿಕ್ಷಣ ವೃತ್ತಿಯನ್ನ ಪಡೆದ ನಮಗೆಲ್ಲಾ ರಾಷ್ಟ್ರ ನಿರ್ಮಾಣದ ಕೈಂಕರ್ಯದ ಸೇವೆಗೆ ನಮಗೆ ಸಿಕ್ಕಿದ ದೇಶ ಸೇವೆಯೆಂದೇ ಭಾವಿಸಿಕೊಂಡು ತರಗತಿಯ ಕೋಣೆಯಲ್ಲಿ ರಾಧಾಕೃಷ್ಣನ್ ಅವರ ಹೇಳಿಕೆಯಂತೆ ಅರ್ಧಭಾಗದ ವಿಷಯಾಧಾರಿತ ಅಂಶಗಳ ಜೊತೆಗೆ ಮೌಲ್ಯಾಧಾರಿತ ಶಿಕ್ಷಣವನ್ನು ಆಕ಼ರ್ಷಕ ಬೋಧನಾ ಶೈಲಿ, ನಿರರ್ಗಳತೆ, ವಿಷಯದ ಮೇಲಿನ ಪ್ರಭುತ್ವದೊಂದಿಗೆ ವಿದ್ಯಾರ್ಥಿಗಳನ್ನು ಬಹುಬೇಗ ಆರ್ಕಷಿಸುವಂತೆ ಮಾಡಿ ಪ್ರಾಧ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಏರು ಜವ್ವನದ ಯುವಕರಂತೆ ಹಾಸ್ಯ ವಿರೋಧಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪುವಂತೆ ಶಿಕ್ಷಕನೊಬ್ಬನ ಬೋಧನೆ ಅವನ ಗೌರವದ ಜೊತೆಗೆ ವ್ಯಕ್ತಿತ್ವ, ಸೌಜನ್ಯ, ಸ್ನೇಹಶೀಲತೆ ಯ ಮೂಲಕ ಎಲ್ಲಾ ವಿದ್ಯಾರ್ಥಿಗಳ ಗಮನವನ್ನು ಸೆಳೆಯಬಹುದೆಂಬುದನ್ನು ಮೈಸೂರಿನಲ್ಲಿ ಅವರ ವರ್ಗಾವಣೆಯ ಸಂದರ್ಭದಲ್ಲಿ ಕಾಲೇಜಿನಿಂದ ಮೈಸೂರು ರೈಲ್ವೇ ನಿಲ್ದಾಣದವರೆಗೆ ಅವರ ಹೆಮ್ಮೆಯ ವಿದ್ಯಾರ್ಥಿಗಳು ಭಾವಾನಾತ್ಮಕವಾಗಿ ನೀಡಿದ ಬಿಳ್ಕೊಡುಗೆಯ ಸಂದರ್ಭ ನಮ್ಮೆಲ್ಲರ ಶಿಕ್ಷಕರನ್ನು ನೆನಪಿಸಲೇಬೇಕು. (9ನೇ ತರಗತಿಯ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ಎನ್ನುವ ಪಾಠದಲ್ಲಿ ಇರುವಂತೆ)
ಸಂಸ್ಕಾರವಿಲ್ಲದ ವಿದ್ಯೆ ಅಪ್ರಯೋಜಕ ಎಂಬ ಒಂದು ಮಾತಿದೆ. ಸತ್ಯ ತೇತ್ರಾಯುಗದಲ್ಲಿ ಶಿಕ್ಷಣ ಎನ್ನುವುದು ಹೊರೆಯಾಗಿರದೇ ಆಟವಾಗಿತಂತೆ. ಮಕ್ಕಳು ಸಂಗೀತ, ಸಾಹಿತ್ಯ, ನಾಟಕ, ಚಿತ್ರಕಲೆ, ಮನರಂಜನೆಯ ಮೂಲಕ ಶಿಕ್ಷಣವನ್ನು ಕಲಿಯುತ್ತಿದ್ದರು. ಆದರೆ ಇಂದು ಕಲಿಯುಗದಲ್ಲಿ ಶಿಕ್ಷಣವು ಮಕ್ಕಳಿಗೆ ಹೊರೆಯಾಗುತ್ತಿರುವ ಅಂಶವನ್ನು ನಾವು ಗಮನಿಸುತ್ತಿದ್ದೇವೆ. ಅನೇಕ ವಿಷಯಗಳ ಅಧ್ಯಯನ, ಗೃಹಪಾಠ, ಬಾಯಿಪಾಠ, ಒತ್ತಡದಿಂದ ಮಕ್ಕಳು ಕಲಿಯುವ ಪರಿಸ್ಥಿತಿಯಿದೆ. ಎಷ್ಟೇ ವಿಜ್ಞಾನದ ಸಾಧನಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಕೂರಿಸಿ ಅವರನ್ನು ಬಂಧನದಲ್ಲಿರಿಸಿ ನೀಡುವ ಶಿಕ್ಷಣ ನಿಜಕ್ಕೂ ಸರ್ವಜ್ಞರ ನೆನಪನ್ನ ತರುತ್ತದೆ. ಶಿಕ್ಷಣದಲ್ಲಿ 2 ವಿಧ. ಒಂದು ಔಪಾಚಾರಿಕ ಇನ್ನೊಂದು ಅನೌಪಾಚಾರಿಕ.
“ಸರ್ವಜ್ಞನೆಂಬುವವನು ಗರ್ವದಿಂದಾವನೇ? ಸರ್ವರೊಳಗೊಂದು ನುಡಿ ಕಲಿತು ವಿದ್ಯೆಯ ಪರ್ವತವೇ ಆದ ಆತ ನಾಲ್ಕು ಗೋಡೆಗಳ ನಡುವೆ ಕಲಿತವನಲ್ಲ ಆತನ ಶಿಕ್ಷಣ ಅನೌಪಾಚಾರಿಕವಾದದ್ದು. ಅವನಂತೆ ಹೆಚ್ಚಿನ ತಜ್ಞನರು ನಾಲ್ಕು ಗೋಡೆಗಳ ನಡುವೆ ಕುಳಿತವರಲ್ಲ. ಅದರೆ ಸಾಮಾಜಿಕ ಮೌಲ್ಯಗಳು ಇಂದು ನಾವು ಅವರಿಂದ ಕಲಿಯಬೇಕಾಗಿದೆ. ಯಾವುದೇ ಮೂಲ ವಿಚಾರಗಳನ್ನ ಹೇಳಿಕೊಡದ ಇಂದಿನ ಶಿಕ್ಷಣ ಒಂದು ರೀತಿಯ ಹೊಟ್ಟೆಪಾಡಿಗೆ ಮಾಡುವ ಕಸುಬು ಮಾತ್ರವಾಗಿದೆ. ಔಪಾಚಾರಿಕವಾಗಿ ಪಡೆಯುವ ಇಂದಿನ ಶಿಕ್ಷಣದಲ್ಲಿ ಮಾನವೀಯತೆ ಮತ್ತು ನೈತಿಕತೆ ಇಲ್ಲದ ಕಾರಣ ವಿದ್ಯಾವಂತರೇ ಹೆಚ್ಚು ಭ್ರಷ್ಟಾಚಾರಿಗಳಾಗಿದ್ದಾರೆ. ಬುನಾದಿಯಾಗಿರುವ ಶಿಕ್ಷಣ ಕ್ಷೇತ್ರದಲ್ಲೇ ಧರ್ಮಗ್ಲಾನಿ ಇರುವಾಗ ಅದು ಸಹಜವಾಗಿ ಎಲ್ಲಾ ಕ್ಷೇತ್ರಗಳಲ್ಲೂ ವಿಸ್ತರಿಸುತ್ತದೆ. ತಂತ್ರಜ್ಞಾನದ ಪರಿಕಲ್ಪನೆಗಳ ಮೂಲಕ ತರಗತಿ ಕೋಣೆಯಲ್ಲಿ ನಾಲ್ಕು ಗೋಡೆಗಳ ನಡುವೆ ಈ ದೇಶದ ಯಾವ ಶಿಕ್ಷಕನಿಗೂ ಮೌಲ್ಯವನ್ನು ಕಲಿಸಲು ಸಾಧ್ಯವಿಲ್ಲ. ಗಣಿತದಲ್ಲಿ 2+2 = 4 ಎನ್ನುವುದನ್ನ ಮಾತ್ರ ನಿಖರವಾಗಿ ಅಂಕೆ ಸಂಖ್ಯೆಗಳಿಗೆ ಅನುಗುಣವಾಗಿ ತಂತ್ರಜ್ಞಾನದ ಮೂಲಕ ಹೇಳಿಕೊಡಬಹುದು. ಭಾವಾನಾತ್ಮಾಕವಾಗಿ ನೀಡುವ ಯಾವ ಮೌಲ್ಯದ ಅಂಶವೂ ಮಗುವಿನ ವರ್ತನೆಯನ್ನು ಪರಿವರ್ತಿಸುವ ಅಂಶವೂ ಇಲ್ಲಿ ಇಲ್ಲ. ಆ ಕಾರಣದಿಂದ ಈ ಮೇಲಿನ ಎಲ್ಲಾ ವಿಚಾರಗಳನ್ನು ಹೊಸ ಶಿಕ್ಷಣ ನೀತಿ ಎಳೆಎಳೆಯಾಗಿ ಬಿಚ್ಚಿಟಿದೆ. ಈ ಹಿಂದೆ ಅನುಸರಿಸುತ್ತಿದ್ದ ಅಂಕಾಧಾರಿತ ಶಿಕ್ಷಣವನ್ನು ದೂರಿಕರಿಸಿ, ರೂಪಣತ್ಮಾಕ ವಿಚಾರಧಾರೆಗಳಿಗೆ ಹೆಚ್ಚು ಒತ್ತನ್ನ ನೀಡಿದ ನೀತಿಯ ಆಶಯಗಳನ್ನು ರಾಷ್ಟç ನಿರ್ಮಾಣದ ವೃತ್ತಿಯನ್ನ ನಿರ್ವಹಿಸುವ ನಾವೆಲ್ಲಾ ತಿಳಿದು ಇಡೀ ದೇಶದ ಮಾನವ ಸಂಪತ್ತನ್ನು ರೂಪಿಸುವ ಜವಾಬ್ಧಾರಿಯನ್ನ ಜವಾಬ್ದಾರಿಯಿಂದ ನಿರ್ವಹಿಸಲು ಇಂದೇ ಒಂದಾಗೋಣವೇ.








