ಶಿಕ್ಷಣ

ಅಂತರರಾಷ್ಟ್ರೀಯ ಒಲಿಂಪಿಯಾಡ್‌ನಲ್ಲಿ ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳ ಸುರಿಮಳೆ

Views: 1138

ಕನ್ನಡ ಕರಾವಳಿ ಸುದ್ದಿ :ಎಸ್‌ಓಎಫ್ ವತಿಯಿಂದ ನಡೆಸಲಾದ ಗಣಿತ, ವಿಜ್ಞಾನ, ಇಂಗ್ಲಿಷ್, ಸಾಮಾನ್ಯ ಜ್ಞಾನ, ಹಿಂದಿ ಮತ್ತು ಕಂಪ್ಯೂಟರ್ ವಿಷಯಗಳ ಅಂತರರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಶಂಕರನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್‌ನ 252 ವಿದ್ಯಾರ್ಥಿಗಳು ಭಾಗವಹಿಸಿ, ಅದರಲ್ಲಿ 98 ಗೋಲ್ಡ್ ಮೆಡಲ್‌ಗಳನ್ನು ಗೆದ್ದು ಅಪೂರ್ವ ಸಾಧನೆ ಮೆರೆದಿದ್ದಾರೆ.

ಈ ಸಾಧನೆ ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಮರ್ಪಣೆ ಮತ್ತು ಸಂಸ್ಥೆಯ ಶ್ರೇಷ್ಠ ಶಿಕ್ಷಣ ಪದ್ಧತಿಯ ಪ್ರತಿಬಿಂಬವಾಗಿದೆ.

ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್‌ನಲ್ಲಿ ಒಂದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಒಲಿಂಪಿಯಾಡ್ ಪರೀಕ್ಷೆಗಳಿಗಾಗಿ ವ್ಯವಸ್ಥಿತ ತರಬೇತಿ ನೀಡಲಾಗುತ್ತಿದ್ದು, ಅದ್ದರಿಂದಲೇ ಇಂತಹ ಅದ್ಭುತ ಫಲಿತಾಂಶಗಳು ಸಾಧ್ಯವಾಗಿವೆ. ವಿದ್ಯಾರ್ಥಿಗಳಲ್ಲಿನ ಸ್ಪರ್ಧಾತ್ಮಕ ಮನೋಭಾವವನ್ನು ಉತ್ತೇಜಿಸುವಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ತಮಗೆ ತಾವು ಸಾಬೀತುಪಡಿಸಿಕೊಳ್ಳುವ ದಿಶೆಯಲ್ಲಿ ಈ ಫಲಿತಾಂಶ ಮಹತ್ವದ ಮೈಲಿಗಲ್ಲಾಗಿದೆ.

Related Articles

Back to top button
error: Content is protected !!