ಕರಾವಳಿ
ಕುಂದಾಪುರ:ಕುಂದಬಾರಂದಾಡಿಯಲ್ಲಿ ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ: 7 ಮಂದಿ ಅರೆಸ್ಟ್

Views: 446
ಕುಂದಾಪುರ: ಕುಂದಬಾರಂದಾಡಿ ಗ್ರಾಮದ ಕೊಳೂರು ಕ್ರಾಸ್ನ ಯುನಿಟಿ ಕ್ರಷರ್ ಬಳಿಯ ಸರಕಾರಿ ಹಾಡಿಯಲ್ಲಿ ಇಸ್ಪೀಟು ಜುಗಾರಿ ಅಡ್ಡೆಗೆ ಎಸ್ಐ ಬಸವರಾಜ ಕನಶಟ್ಟಿ ಹಾಗೂ ಸಿಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿ 7 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳೀಯರಾದ ಪ್ರವೀಣ, ಮಹಾದೇವ, ಸುಧಾಕರ, ಪ್ರಶಾಂತ್, ಬಾಲ, ದಿನೇಶ್, ಹಾಗೂ ವಿಕ್ರಮ ಬಂಧಿತರು. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.