ಕ್ರೀಡೆ

ಲಿಟ್ಲ್ ಸ್ಟಾರ್( ವಿದ್ಯಾರಣ್ಯ) ಆಂಗ್ಲ ಮಾಧ್ಯಮ ಶಾಲೆ: ಪ್ರಕೃತಿ.ಪಿ. ಶೆಟ್ಟಿ, ಚದುರಂಗ ಸ್ಪರ್ಧೆಯಲ್ಲಿ  ರಾಜ್ಯಮಟ್ಟಕ್ಕೆ ಆಯ್ಕೆ

Views: 43

ಕುಂದಾಪುರ:ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕೋಡಿಕನ್ಯಾನ, ಇವರ ಸಹಯೋಗದಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಚದುರಂಗ ಸ್ಪರ್ಧೆಯು ಇತ್ತೀಚಿಗೆ ಕೋಡಿಕನ್ಯಾನದಲ್ಲಿ ಜರುಗಿತು.

ಪ್ರೌಢಶಾಲಾ ವಿಭಾಗದ 17ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಲಿಟ್ಲ್ ಸ್ಟಾರ್( ವಿದ್ಯಾರಣ್ಯ) ಆಂಗ್ಲ ಮಾಧ್ಯಮ ಶಾಲೆ ಯಡಾಡಿ – ಮತ್ಯಾಡಿ ,ಕುಂದಾಪುರ ,ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರಕೃತಿ.ಪಿ. ಶೆಟ್ಟಿ ಯವರು ಉಡುಪಿ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ರಕೃತಿ ಪಿ ಶೆಟ್ಟಿ ದಬ್ಬೆಕಟ್ಟೆಯ ಪ್ರಕಾಶ್ ಸಿ ಶೆಟ್ಟಿ ಮತ್ತು ಸಂಗೀತ ಶೆಟ್ಟಿ ದಂಪತಿಗಳ ಪುತ್ರಿ,ಈಕೆ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ,ಚದುರಂಗ ಸ್ಪರ್ಧೆಗೆ ರಾಜ್ಯಮಟ್ಟಕ್ಕೆ ಎರಡನೇ ಬಾರಿ ಆಯ್ಕೆಯಾಗಿರುತ್ತಾಳೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ.

ವಿಜೇತಳಿಗೆ ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀಯುತ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿಗಳಾದ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಶ್ರೀ ಭರತ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಶ್ರೀ ಪ್ರದೀಪ್.ಕೆ ,ಸಂಸ್ಥೆಯ ದೈಹಿಕ ಶಿಕ್ಷಣದ ಶಿಕ್ಷಕರು ಹಾಗೂ ಶಿಕ್ಷಕರು ,ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

 

Related Articles

Back to top button
error: Content is protected !!