ಕ್ರೀಡೆ
ಅಂತರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಸಾಧನೆಗೈದ ಕುಂದಾಪುರದ ಆರ್.ಎನ್.ಶೆಟ್ಟಿ ಪಿಯು ಕಾಲೇಜಿನ ಮಿಥುನ್.ಆರ್

Views: 194
ಕುಂದಾಪುರ: ಇತ್ತೀಚಿಗೆ ಶಿಮೊಗ್ಗದಲ್ಲಿ ನಡೆದ ಓಪನ್ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ – 2024ರಲ್ಲಿ ಬಸ್ರೂರಿನ ಮಿಥುನ್.ಆರ್ 16 ರಿಂದ 17 ವರ್ಷದ ವಯೋಮಾನದ ವಿಭಾಗದಲ್ಲಿ ಕಟಾದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಈತ ಬಸ್ರೂರಿನ ನಿವಾಸಿ ರಮೇಶ್ ಹಾಗೂ ಕುಸುಮ ದಂಪತಿಯ ಪುತ್ರ
ಆರ್.ಎನ್.ಶೆಟ್ಟಿ ಕಂಪೋಸಿಟ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಾಧಕ ಕರಾಟೆಪಟು ಮಿಥುನ್. ಆರ್ ಗೆ ಕಾಲೇಜಿನ ಸಂಚಾಲಕರಾದ ಶ್ರೀ ಸುಕುಮಾರ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ ಹಾಗೂ ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.






