ಯುವಜನ

ಇಬ್ಬರು ಸಹೋದರರ ತ್ರಿಕೋನ ಪ್ರೇಮ ಕಥೆ: ಕೊಲೆಯಲ್ಲಿ ಅಂತ್ಯ ಕಂಡ ದುರಂತ..!

Views: 212

ಜಾರ್ಖಂಡ್: ಜಾರ್ಖಂಡ್‍ನ ಗೋಮಿಯಾದಲ್ಲಿ ಇಬ್ಬರು ಸಹೋದರರು ಒಂದೇ ಹುಡುಗಿಯನ್ನು ಪ್ರೀತಿಸಿದ ನಂತರ ಈ ತ್ರಿಕೋನ ಪ್ರೇಮ ಕಥೆ ತಿರುವು ಪಡೆದು ಕೊಲೆಗೆ ಕಾರಣವಾಗಿದೆ.

ಕತಾರಾ ಒಪಿ ಪ್ರದೇಶದ ಜಿರ್ಕಿ ಎಂಬ ಸಣ್ಣ ಹಳ್ಳಿಯಲ್ಲಿ, ಸೋದರ ಸಂಬಂಧಿಗಳಾದ ವಿನೋದ್ ಮತ್ತು ಮನೀಶ್ ಒಂದೇ ಹುಡುಗಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ವಿನೋದ್ ಐದು ವರ್ಷಗಳಿಂದ ಅವಳೊಂದಿಗೆ ಸಂಬಂಧ ಹೊಂದಿದ್ದ. ಅವರ ಸಂಬಂಧವು ಮದುವೆಯ ಹಂತಕ್ಕೆ ತಲುಪಿತ್ತು. ಆದರೆ, ತಾನು ಪ್ರೀತಿಸುತ್ತಿದ್ದ ಹುಡುಗಿ ಮೇಲೆ ಅನುಮಾನಗೊಂಡಿದ್ದ ವಿನೋದ್ ಅವಳ ಮೊಬೈಲ್ ಚೆಕ್ ಮಾಡಿದಾಗ ಆಕೆಗೆ ತನ್ನ ಸಹೋದರ ಸಂಬಂಧಿ ಮನೀಶ್‍ನೊಂದಿಗೆ ಸಂಬಂಧವಿದೆ ಎಂಬುದು ತಿಳಿದು ಬಂದಿದೆ. ಆಗ ಕೋಪ ಮತ್ತು ಅಸೂಯೆಯಿಂದ ವಿನೋದ್ ಸೇಡು ತೀರಿಸಿಕೊಳ್ಳುವ ನಿರ್ಧಾರ ಮಾಡಿದ್ದಾನೆ.

ಪೊಲೀಸರ ಪ್ರಕಾರ, ಅವನು ಗೋಮಿಯಾದಲ್ಲಿ ಕಮ್ಮಾರನನ್ನು ಭೇಟಿ ಮಾಡಿ ಹರಿತವಾದ ಕೊಡಲಿಯನ್ನು ರೆಡಿ ಮಾಡಿಸಿ ಅದರಿಂದ ತನ್ನ ಸೋದರ ಸಂಬಂಧಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಕೊಲೆ ನಡೆದ ದಿನ ವಿನೋದ್ ತನ್ನ ತಾಯಿಯೊಂದಿಗೆ ಜಿರ್ಕಿಯಲ್ಲಿರುವ ತನ್ನ ಸೋದರ ಮಾವನ ಮನೆಗೆ ಹೋಗಿದ್ದಾನೆ. ಮನೀಶ್ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಕಂಡಿದ್ದಾನೆ. ಈ ಅವಕಾಶವನ್ನು ಬಳಸಿಕೊಂಡ ವಿನೋದ್, ಮನೀಶ್ ಮೇಲೆ ಆಯುಧದಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ

ಮನೀಶ್‍ನ ಕ್ರೂರ ಹತ್ಯೆಯು ಕುಟುಂಬ ಮತ್ತು ಹಳ್ಳಿಯಾದ್ಯಂತ ಆಘಾತವನ್ನುಂಟುಮಾಡಿತು. ನಂತರ, ಗ್ರಾಮಸ್ಥರು ಪ್ರತಿಭಟನೆಗಿಳಿಸು ರಸ್ತೆಗಳಲ್ಲಿ ತಡೆಯೊಡ್ಡಿದರು. ಹಾಗೂ ತ್ವರಿತ ಕ್ರಮ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿದ್ದರಿಂದ ಅಲ್ಲಿ ಆಕ್ರೋಶ ಭುಗಿಲೆದ್ದಿತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತ್ವರಿತವಾಗಿ ತಮ್ಮ ತನಿಖೆಯನ್ನು ತೀವ್ರಗೊಳಿಸಿದರು.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಮತ್ತು ಆರಂಭದಲ್ಲಿ ಅವರನ್ನು ದಾರಿತಪ್ಪಿಸಲು ಪ್ರಯತ್ನಿಸಿದ ವಿನೋದ್‍ನನ್ನು ವಿಚಾರಣೆ ನಡೆಸಿದರು. ಕೊನೆಗೆ, ಒತ್ತಡದಲ್ಲಿ, ವಿನೋದ್ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡ. ಇದರಿಂದಾಗಿ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಒಬ್ಬ ಯುವಕ ಜೈಲು ಪಾಲಾಗಿ ಮತ್ತೊಬ್ಬನ್ನು ಕಳೆದುಕೊಂಡ ಕುಟುಂಬ ಈಗ ದುಃಖದಲ್ಲಿ ಮುಳುಗಿದೆ.

Related Articles

Back to top button
error: Content is protected !!