ಕರಾವಳಿ

ಉಡುಪಿ:ಮನೆಯಲ್ಲಿ ಅಗ್ನಿ ಅವಘಡ, ಬಾರ್ ಮಾಲಕ ಸಾವು, ಪತ್ನಿ ಗಂಭೀರ

Views: 322

ಉಡುಪಿ:  ಅಂಬಲಪಾಡಿ ಸಮೀಪ ಬಾರ್ & ರೆಸ್ಟೋರೆಂಟ್‌ನ ಮಾಲಕ ಮನೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದಾರೆ. ಅವರ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ  ಸೋಮವಾರ ಮುಂಜಾನೆ ಸಂಭವಿಸಿದೆ.

ಬೆಂಕಿಯ ಕೆನ್ನಾಲಿಗೆ ಸಿಲುಕಿದ ಬಾರ್ ಮಾಲಕ ರಮಾನಂದ ಶೆಟ್ಟಿ ಅವರು ಸಾವನ್ನಪ್ಪಿದ್ದಾರೆ.ಈ ಘಟನೆಯಲ್ಲಿ ಅವರ ಪತ್ನಿ ಅಶ್ವಿನಿ ಅವರಿಗೂ ಗಂಭೀರ ಗಾಯವಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದಾರೆ. ಮನೆಯೊಳಗೆ ಮತ್ತಿಬ್ಬರು ಸಿಲುಕಿಕೊಂಡಿದ್ದು ಅವರ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ.ಮನೆಯ ಎಸಿ ಬ್ಲಾಸ್ಟ್ ಆಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.

Related Articles

Back to top button