
Views: 1
ಕುಂದಾಪುರ : ಇತ್ತೀಚೆಗೆ ತಾಲೂಕಿನ ಹಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬತ್ತಗುಳಿ ಪರಿಶಿಷ್ಟ ಪಂಗಡ ಸಮುದಾಯದ ಪ್ರದೇಶದಲ್ಲಿ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು. ತಾಲೂಕು ಸ್ವೀಪ್ ಸಮಿತಿ, ಗ್ರಾಮ ಪಂಚಾಯತ್ ಹಾಲಾಡಿ. ಜಂಟಿ ಆಶ್ರಯದಲ್ಲಿ ಕಾಯ೯ಕ್ರಮ ನಡೆಯಿತು.
ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ, ANSSIRD ಮೈಸೂರು ನ ತಾಲೂಕು ವೀಕೆಂದ್ರಿಕೃತ ತರಬೇತಿ ಸಂಯೋಜಕ ಬಿ. ಮೋಹನ್ ಚಂದ್ರ ಕಾಳಾವರ್ಕಾರ್, ತೆಕ್ಕಟ್ಟೆ ಪಿಡಿಓ ಸುನಿಲ್, ತಾಲೂಕು ಪಂಚಾಯತ್ ನ ಉದಯ್ ಕುಮಾರ್ ಹಾಗೂ ಚಂದ್ರ ಶೇಖರ್ ಶೆಟ್ಟಿ, ಬತ್ತಗುಳಿಯ ಕುಮಾರ್ ದಾಸ್, ಹಾಲಾಡಿ ಪಂಚಾಯತ್ ಪಿಡಿಓ ವಸಂತ್ ಕುಮಾರ್ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ಪರಿಶಿಷ್ಟ ಸಮುದಾಯದ ಮುಖಂಡರು ಇದ್ದರು.ರಘುವೀರ. ಕೆ ನಿವೃತ್ತ ಮುಖ್ಯ ಶಿಕ್ಷಕರು, ಮೋಹನ್ ಚಂದ್ರ ಕಾಳಾವರ್ಕಾ೯ರ್ ಇವರ ಸಂಯೋಜನೆಯಲ್ಲಿ ಕೇಳಿರಿ.. ಕೇಳಿರಿ.. ಜನಗಳೇ.. ಚುನಾವಣೆ ಬಂತು ಚುನಾವಣೆ. ಲಾವಣಿ ಹಾಡಿನ ಮೂಲಕ ಮೇ 10 ರಂದು ನಡೆಯಲಿರುವ ಚುನಾವಣೆಗೆ ಹಣ-ಹೆಂಡ ಯಾವುದೇ ಆಮಿಷಗಳಿಗೆ ಬಲಿಯಾಗದಿರಿ, ಮತಕ್ಕೆ ಬೆಲೆ ಕಟ್ಟದಿರಿ,ಮತ ಮಾರಾಟಕ್ಕಿಲ್ಲ ಎಂಬ ಮತದಾನದ ಜಾಗೃತಿ ಸಂದೇಶದ ಲಾವಣಿ ಹಾಡಿನ ಮೂಲಕ ಮತದಾನ ಜನ ಜಾಗೃತಿ ಮೂಡಿಸಿದರು.








