ಯುವಜನ

ಕಾಲೇಜಿನಲ್ಲಿ ಓದುತ್ತಿದ್ದಾಗ ಇಬ್ಬರ ಮಧ್ಯೆ ಪ್ರೀತಿಗೆ ಪೋಷಕರ ವಿರೋಧ:ಕೆರೆಗೆ ಹಾರಿದ ಯುವ ಪ್ರೇಮಿಗಳ ಸಾವಿಗೆ ಹೊಸ ಟ್ವಿಸ್ಟ್‌?!

Views: 213

ಬೆಂಗಳೂರು: ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳು.

ಕಳೆದ ಜುಲೈ 1ರಂದು ತಲಘಟ್ಟಪುರ ಸಮೀಪದ ಅಂಜನಾಪುರದಲ್ಲಿ ವಾಸವಿದ್ದ ವಿದ್ಯಾರ್ಥಿನಿ ಹಾಗೂ ಕೋಣನಕುಂಟೆ ನಿವಾಸಿ ಶ್ರೀಕಾಂತ್ ನಾಪತ್ತೆಯಾಗಿದ್ದರು. ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಂದು ನೈಸ್ ರಸ್ತೆ ಸಮೀಪದ ಕೆರೆಯಲ್ಲಿ ಇಬ್ಬರು ಯುವ ಪ್ರೇಮಿಗಳ ಶವ ತೇಲಿಕೊಂಡು ಬಂದಿದೆ.

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ತನ್ನ ಸಾವಿಗೆ ತಾವೇ ಕಾರಣ ಎಂದು ವಿಡಿಯೋ ಮಾಡಿ ಮೊಬೈಲ್‌ ಅನ್ನು ಆಟೋದಲ್ಲಿಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಪ್ರೇಮಿಗಳ ಆತ್ಮಹತ್ಯೆಗೆ ಕಾರಣವೇನು ?

ಮೃತ ಶ್ರೀಕಾಂತ್ ಈ ಮೊದಲೇ ಮದುವೆಯಾಗಿದ್ದ. ಪಾರ್ಟ್ ಟೈಂ ಅಲ್ಲಿ ಆಟೋ ಡ್ತೈವರ್ ಆಗಿ ಕೆಲಸ ಮಾಡುತ್ತಿದ್ದ. ಆಟೋ ಓಡಿಸುತ್ತಲೇ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನಲ್ಲೇ ಶ್ರೀಕಾಂತ್ ಹಾಗೂ ಅಂಜನಾ ಮಧ್ಯೆ ಪ್ರೀತಿಯಾಗಿದೆ.

ಮದುವೆಯಾಗಿ ಪತ್ನಿಯಿದ್ದರೂ ತನ್ನದೇ ಕಾಲೇಜಿನ ಅಂಜನಾಳನ್ನು ಶ್ರೀಕಾಂತ್‌ ಪ್ರೀತಿಸಲು ಶುರು ಮಾಡಿದ್ದ. ಗಂಡನ ಮೊಬೈಲ್‌ನಲ್ಲಿ ಚಾಟಿಂಗ್ ನೋಡಿ ಶ್ರೀಕಾಂತ್ ಪತ್ನಿ ಪ್ರಶ್ನಿಸಿದ್ದಳು. ಹಿರಿಯರು ಹಲವು ಬಾರಿ ಶ್ರೀಕಾಂತ್‌ಗೆ ಬುದ್ದಿವಾದ ಹೇಳಿದ್ದರು ಆತ ತನ್ನ ಚಾಳಿ ಮುಂದುವರೆಸಿದ್ದ. ಕಾಲೇಜಿಗೆ ಹೋಗ್ತಿನೆಂದು ಲವ್ವರ್ ಅಂಜನಾಳ ಜೊತೆ ಶ್ರೀಕಾಂತ್ ಸುತ್ತಾಡ್ತಿದ್ದನಂತೆ.

ಶ್ರೀಕಾಂತ್ ಮನೆಯಲ್ಲಿ ಅಂಜನಾ ವಿಚಾರಕ್ಕೆ ಹಲವು ಬಾರಿ ಜಗಳವಾಗಿತ್ತು. ಆಟೋದಲ್ಲಿ ತುಳಸಿಪುರ ಕೆರೆ ಬಳಿ ಬಂದಿರುವ ಶ್ರೀಕಾಂತ್‌, ಅಂಜನಾಳ ಸಮೇತ ಕೆರೆಗೆ ಜಿಗಿದಿದ್ದಾರೆ. ಆಟೋವನ್ನ ತುಳಸಿಪುರ ಕೆರೆ ದಡದಲ್ಲಿ ಬಿಟ್ಟು ಪರಸ್ಪರ ಇಬ್ಬರ ಕೈಗೂ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಬೈಲ್ ಟವರ್ ಡಂಪ್ ಆಧರಿಸಿ ಪೊಲೀಸರು ತುಳಸಿಪುರ ಕೆರೆ ಬಳಿ ಬಂದಾಗ ಮೃತದೇಹ ತೇಲುತ್ತಿರೋದು ಬೆಳಕಿಗೆ ಬಂದಿದೆ.

Related Articles

Back to top button
error: Content is protected !!