ನಿರಂತರ ಪರಿಶ್ರಮ, ಶ್ರದ್ಧೆಯಿಂದ ಸಾಧನೆಯ ಶಿಖರವೇರಿದ ಮೂರುವರೆ ಅಡಿ ಕುಳ್ಳಿ ಈಗ IAS ಅಧಿಕಾರಿ!

Views: 975
ಮನಸ್ಸು ಮಾಡಿದರೆ ಯಾವುದು ಕಷ್ಟವಾಗುವುದಿಲ್ಲ ಸಾಧನೆಯನ್ನು ಮಾಡಿಯೇ ಮಾಡುತ್ತೇನೆ ಎಂಬ ಹಠ, ಛಲ ಇದ್ದರೆ ಏನನ್ನು ಸಾಧಿಸಬಹುದು. ನಿರಂತರ ಪರಿಶ್ರಮ, ಶ್ರದ್ಧೆಯಿಂದ ಪ್ರಯತ್ನ ಪಟ್ಟಲ್ಲಿ ಸಾಧನೆಯ ಶಿಖರ ತಲುಪಲು ಸಾಧ್ಯ
ಜೀವನದಲ್ಲಿ ಎಲ್ಲವು ಸರಿ ಇದ್ದು ಸಾಧನೆ ಮಾಡುವವರ ಸಂಖ್ಯೆ ಕಡಿಮೆ, ದೇವರು ದೇಹದ ಪ್ರತಿಯೊಂದು ಅಂಗಗಳನ್ನು ಸರಿಯಾಗಿ ಕೊಟ್ಟಿದ್ದರು ಸರಿಯಾದ ರೀತಿಯಲ್ಲಿ ದುಡಿದು ತಿನ್ನದೇ ಇರುವವರ ಮಧ್ಯೆ ಈ ಹೆಣ್ಣು ಮಗಳು ತಾನು ಹೇಗಿದ್ದರೇನು ಜೀವನದಲ್ಲಿ ಏನಾದರು ಸಾಧಿಸಬೇಕು ಅಪಹಾಸ್ಯ ಮಾಡುವವರ ಮಧ್ಯೆ ಬೆಳೆಯಬೇಕು ಎನ್ನುವ ಛಲದಿಂದ ಇದೀಗ ಈ ಯುವತಿ IAS ಅಧಿಕಾರಿಯಾಗಿದ್ದಾರೆ.ಇವರ ಬೆಳವಣಿಗೆಯ ಹಾದಿ ಹೇಗಿತ್ತು ಅನ್ನೋದನ್ನು ತಿಳಿಯೋಣ ಬನ್ನಿ..

ಸಮಾಜದಲ್ಲಿ ಎಷ್ಟೋ ಜನ ಗೇಲಿ ಮಾಡಿದರೂ ಸಹನೆ ಕಳೆದುಕೊಳ್ಳದ ಈಕೆ ಸಾಧನೆ ಕಡೆ ಹೆಚ್ಚು ಗಮನ ಕೊಡುತ್ತಿದ್ದರು, ಇವರ ಹೆಸರು ಆರತಿ ಡೋಗ್ರಾ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಜನಿಸಿದ ಆರತಿ ಡೋಗ್ರಾ ಕೇವಲ 3.5 ಅಡಿ ಎತ್ತರ ಇದ್ದಾರೆ. ಇವರು ಶಾಲೆಯ ಪ್ರಾಂಶುಪಾಲರಾದ ಕರ್ನಲ್ ರಾಜೇಂದ್ರ ಮತ್ತು ಕುಂಕುಮ್ ಡೋಗ್ರಾ ಅವರ ಪುತ್ರಿ. ಆರತಿ ಡೋಗ್ರಾ ಅವರ ಹೆತ್ತವರು ಹಂತ ಹಂತವಾಗಿ ಆಕೆ ಸಾಧನೆಗೆ ಬೆಂಬಲಿಸಿದರು.
ಆರತಿ ಡೋಗ್ರಾ ಅವರು ಜನಿಸಿದಾಗ, ಈ ಮಗು ಮುಂದೆ ಭವಿಷ್ಯದಲ್ಲಿ ಶಾಲೆಗೆ ಹೋಗಲು ಆಗೋದಿಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದರಂತೆ ಆದ್ರೆ, ಮುಂದೆ ಬೆಳೆಯುತ್ತಾ ಇದನ್ನೆಲಾ ದಿಕ್ಕರಿಸಿ ಡೋಗ್ರಾ ಡೆಹ್ರಾಡೂನ್ನ ಪ್ರತಿಷ್ಠಿತ ಬಾಲಕಿಯರ ಶಾಲೆಯಲ್ಲಿ ಪ್ರವೇಶ ಪಡೆದರು. ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಲೇಡಿ ಶ್ರೀ ರಾಮ್ ಕಾಲೇಜು, ದೆಹಲಿ ವಿಶ್ವವಿದ್ಯಾಲಯ. ಬಾಲ್ಯದಿಂದಲೂ ದೈಹಿಕ ತಾರತಮ್ಯವನ್ನು ಎದುರಿಸಿದ ಆರತಿ ದೋಗ್ರಾ ತನ್ನ ಧೈರ್ಯವನ್ನು ಎಂದಿಗೂ ಬಿಟ್ಟುಕೊಡಲಿಲ್ಲ ಮತ್ತು ಮೊದಲ ಪ್ರಯತ್ನದಲ್ಲಿಯೇ IAS ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಮಹಿಳಾ ಐಎಎಸ್ ಅಧಿಕಾರಿ ಆರತಿ ಡೋಗ್ರಾ ಭಾರತದ ಅತ್ಯಂತ ಪ್ರತಿಷ್ಠಿತ ಪರೀಕ್ಷೆ UPSCಯಲ್ಲಿ ಉತ್ತೀರ್ಣರಾಗಿದ್ದಾರೆ. ಆರತಿ ದೋಗ್ರಾ 2005 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ AIR-56 ನೊಂದಿಗೆ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ರಾಜಸ್ಥಾನ ಕೇಡರ್ 2006 ರ ಬ್ಯಾಚ್ನವರು ಮತ್ತು ಇಲ್ಲಿಂದಲೇ ಸಮರ್ಪಿತ ಸಾರ್ವಜನಿಕ ಸೇವಕರಾಗಿ ಅವರ ಪ್ರಯಾಣ ಪ್ರಾರಂಭವಾಯಿತು. ಅಂದಿನಿಂದ ಅವರು ರಾಜಸ್ಥಾನ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆರತಿ ದೋಗ್ರಾ ಅವರು ರಾಜಸ್ಥಾನದ ಅಜ್ಮೀರ್ನ ಕಲೆಕ್ಟರ್ ಆಗಿದ್ದಾರೆ.
ಸಮಾಜದಲ್ಲಿ ಹೀಯಾಳಿಸಿದವರ ಮುಂದೆ ಛಲದಿಂದ ಸಾದಿಸಿ IAS ಅಧಿಕಾರಿಯಾದ ಈ ಯುವತಿಯ ಲೈಫ್ ಸ್ಟೋರಿ ನಿಜಕ್ಕೂ ಇಂದಿನ ಯುವ ಪೀಳಿಗೆಗೆ ಮಾದರಿ

ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು ನಮ್ಮ ಭವಿಷ್ಯವನ್ನು ಇನ್ನೊಬ್ಬರು ಬಂದು ಬದಲಾಯಿಸುತ್ತಾರೆ ಎಂಬ ಭ್ರಮೆಯಲ್ಲಿ ಕುಳಿತರೆ ಸಾಧನೆ ಅಸಾಧ್ಯ ಅದೆಷ್ಟೋ ಮಂದಿ ಸಾಧಿಸಿ ಸಾರ್ಥಕ ಬದುಕು ಸಾಗಿಸುತ್ತಿದ್ದಾರೆ.
ಸ್ವಾತಂತ್ರ್ಯಾ ನಂತರದ ಭಾರತೀಯರ ಜನಜೀವನ ಆಧ್ಯಾಯದಲ್ಲಿ ತಮನ್ನಾ ಭಾಟಿಯಾ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ.ಅವರು ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಾರೆ. ಇವರು ಮಕ್ಕಳಿಗೆ ಆದರ್ಶವಾಗಬೇಕೇ?. ಇದು ಸರಿಯಲ್ಲ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಆದರೆ,ಆರತಿ ಡೋಗ್ರಾ ರವರನ್ನು ಆದರ್ಶವಾಗಿಟ್ಟುಕೊಂಡು ಪ್ರಯತ್ನ ಪಟ್ಟರೆ ಖಂಡಿತವಾಗಿಯೂ ಯಶಸ್ಸು ಖಂಡಿತ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಈ ಸ್ಟೋರಿ ಇಷ್ಟ ಆಗಿದ್ದರೆ ಹಂಚಿಕೊಂಡು ಇದರಿಂದ ಕೆಲವರಿಗೆ ಸ್ಪೂರ್ತಿಯಾಗಲಿ..










