ಕರಾವಳಿ
ಭಾಸ್ಕರ್ ಕೊಗ್ಗ ಕಾಮತ್ ಅವರಿಗೆ ಬಿಂದುಶ್ರೀ ಪ್ರಶಸ್ತಿ ಪ್ರಧಾನ

Views: 0
ಕುಂದಾಪುರ : ಸುರಭಿ ಬೈಂದೂರು, ಸುರಭಿ ಜೈಸಿರಿ ಆಶ್ರಯದಲ್ಲಿ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಉಪ್ಪಿನ ಕುದ್ರು ಇದರ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಅವರಿಗೆ 2023 ನೇ ಸಾಲಿನ ಬಿಂದುಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿವೃತ್ತ ಬ್ಯಾಂಕ್ ಅಧಿಕಾರಿ ವಸಂತ್ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೃತ್ಯ ಗುರು ಸುರತ್ಕಲ್ ಚಂದ್ರ ಶೇಖರ್ ನಾವಡ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಭೆಯಲ್ಲಿ ನಿವೃತ್ತ ಅಧ್ಯಾಪಕರಾದ ಶಾರದ. ಕೆ, ಶಿರೂರು ಜೆಸಿಐ ಪೂವಾ೯ಧ್ಯಕ್ಷರಾದ ಜಾನ್ವವೀ ಪ್ರಸಾದ, ಶ್ರೀಧರ್ ಬೈಲೋಮನೆ, ಹರೀಶ್ ಶೆಟ್ಟಿ, ಸುರಭಿ ಅಧ್ಯಕ್ಷರಾದ ನಾಗರಾಜ್. ಬಿ. ಯಡ್ತರೆ, ಕಾಯ೯ದಶಿ೯ ಭಾಸ್ಕರ್ ಬಾಡಾ ಇದ್ದರು.
ತಲ್ಲೂರು ಪ್ಯಾಮಿಲಿ ಟ್ರಸ್ಟ್ (ರಿ) ಪ್ರವತ೯ಕರಾದ ಶಿವರಾಮ್ ಶೆಟ್ಟಿ ಪ್ರಶಸ್ತಿ ಪ್ರಧಾನ ಮಾಡಿದರು.
ಹಿರಿಯ ಪತ್ರಕರ್ತ ಜನಾದ೯ನ. ಎಸ್. ಮರವಂತೆ ಅಭಿನಂದನಾ ನುಡಿಗಳನ್ನಾಡಿದರು.
ನಾಗರಾಜ್ ಬಿ. ಯಡ್ತರೆ ಸ್ವಾಗತಿಸಿದರು. ಆನಂದ ಮದ್ದೋಡಿ ನಿರೂಪಿಸಿದರು.






