ಯುವಜನ
ಬಾಲಮಂದಿರದಲ್ಲಿದ್ದ 6 ಮಂದಿ ಅಪ್ರಾಪ್ತ ಬಾಲಕಿಯರು ಭದ್ರತಾ ಸಿಬ್ಬಂದಿಯ ಕೈ ಕಚ್ಚಿ ಪರಾರಿ

Views: 122
ಬೆಂಗಳೂರು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಬಾಲಕಿಯರ ಬಾಲಮಂದಿರ ಸೇರಿದ್ದ 6 ಮಂದಿ ಬಾಲಕಿಯರು ಪರಾರಿಯಾಗಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.
ನಿಮ್ಹಾನ್ಸ್ ಆಸ್ಪತ್ರೆಯ ಬಳಿಯಿರುವ ಬಾಲಕಿಯರ ಬಾಲ ಮಂದಿರದಲ್ಲಿದ್ದ 6 ಮಂದಿ ಬಾಲಕಿಯರು ಗ್ಯಾಂಗ್ ಕಟ್ಟಿಕೊಂಡು ಮುಂಜಾನೆ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕೈಗಳನ್ನು ಕಚ್ಚಿ ಪರಾರಿಯಾಗಿದ್ದಾರೆ.ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುಮಾರು 16ರಿಂದ 17 ವರ್ಷದೊಳಗಿನ 6 ಮಂದಿ ಬಾಲಕಿಯರು ಅಪ್ರಾಪ್ತ ಬಾಲಕಿಯರು ಪರಾರಿಯಾಗಿರುವ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಸಿದ್ದಾಪುರ ಪೊಲೀಸರು ಅಪ್ರಾಪ್ತ ಬಾಲಕಿಯರ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.






