ಯುವಜನ
ಕುಂದಾಪುರ: ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಪೋಕ್ಸೋ ಪ್ರಕರಣ ದಾಖಲು, ಆರೋಪಿಗಾಗಿ ಹುಡುಕಾಟ!

Views: 1039
ಕುಂದಾಪುರ: ಬೆಳ್ವೆ ಗ್ರಾಮದ ನಿವಾಸಿಯಾಗಿರುವ ಪಿಯುಸಿ ವಿದ್ಯಾರ್ಥಿನಿಗೆ ಆಸೆ ಆಮಿಷ ಒಡ್ಡಿ, ಪ್ರೀತಿಸುವ ನಾಟಕವಾಡಿ ಅತ್ಯಾಚಾರ ಮಾಡಿದ ಘಟನೆ ನಡೆದಿದೆ.
ಮಿಥುನ್ ಎನ್ನುವ ಯುವಕ ಪ್ರೀತಿಸುವ ನಾಟಕವಾಡಿ ಕಳೆದ 5 ತಿಂಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದು ವಿದ್ಯಾರ್ಥಿನಿಯನ್ನು ಅತ್ಯಾಚಾರ ನಡೆಸಿದ್ದ.
ವಿದ್ಯಾರ್ಥಿನಿಯ ತೀವ್ರ ಯಾತನೆಯನ್ನು ಗಮನಿಸಿದ ಪೋಷಕರು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶಂಕರನಾರಾಯಣ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.






