ಯುವಜನ

ಅಬ್ಬಿ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿ ನಾಪತ್ತೆ

Views: 307

ಶಿವಮೊಗ್ಗ: ಫಾಲ್ಸ್ ವೀಕ್ಷಣೆಗೆಂದು ಹೋಗಿದ್ದ ಸಾಫ್ಟ್‌ವೇರ್ ಉದ್ಯೋಗಿ ನಾಪತ್ತೆಯಾಗಿರುವ ಘಟನೆ ಹೊಸನಗರ ತಾಲೂಕಿನ ಅಬ್ಬಿ ಫಾಲ್ಸ್ನಲ್ಲಿ ನಡೆದಿದೆ.

ಬಳ್ಳಾರಿ ಮೂಲದ ವಿನೋದ್(26) ನಾಪತ್ತೆಯಾಗಿರುವ ಯುವಕ.

ಫಾಲ್ಸ್ಗೆ ತೆರಳಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ನಾಪತ್ತೆಯಾದ ವಿನೋದ್ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕೆಲಸ ಮಾಡುತ್ತಿದ್ದನಂತೆ. 12 ಜನರ ತಂಡದೊಂದಿಗೆ ಆಗಮಿಸಿ, ಕೊಡಚಾದ್ರಿಯಿಂದ ಅಬ್ಬೆ ಫಾಲ್ಸ್ಗೆ ತೆರಳಿದ್ದರು. ಇದೇ ವೇಳೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಫಾಲ್ಸ್‌ ಬಳಿ ತೆರಳಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ.

ಸದ್ಯ ನಾಪತ್ತೆಯಾಗಿರುವ ವಿನೋದನಿಗಾಗಿ ಅಗ್ನಿಶಾಮಕ ದಳ ಹಾಗೂ ನಗರ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕತ್ತಲೆಯಾಗಿರುವ ಕಾರಣ ಪತ್ತೆ ಕಾರ್ಯಕ್ಕೆ ತೊಡಕು ಉಂಟಾಗಿದೆ.

Related Articles

Back to top button
error: Content is protected !!