ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ “ಕಾಲ” ಖ್ಯಾತಿಯ ಹರಿದಾಸ್ ಕೆ.ಕೆ. ಕಾಳಾವರ‍್ಕರ್

Views: 8
ನಾಟಕ ರಂಗದಿಂದ ತುಳು ಚಲನಚಿತ್ರ ದ ವರೆಗೆ ಸಾಧನೆಗೈದ ಬಹುಮುಖ ಪ್ರತಿಭೆ ಹರಿದಾಸ್ ಕೆ.ಕೆ. ಕಾಳಾವರ್ಕರ್ ರವರ ಸಮಗ್ರ ಪರಿಚಯ
ಶಿಕ್ಷಣ : ಇವರು 1943 ರಂದು ಕಾಳಾವರದಲ್ಲಿ ಜನಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಣಿಯಲ್ಲಿ 5 ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಪಡೆದರು. ಕುಂದಾಪುರ ಬೋರ್ಡ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪಡೆದರು. ಉಡುಪಿ ಎಂ.ಜಿ.ಎಂ ಕಾಲೇಜಿಗೆ ಸೇರಿ ಅಲ್ಲಿ ಪಿ.ಯು.ಸಿ ಶಿಕ್ಷಣ ಪಡೆದರು. ಮತ್ತೆ ಅದೇ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿ 1964-65 ನೇ ಸಾಲಿನಲ್ಲಿ ಬಿ.ಕಾಂ ಪದವಿ ಪಡೆದರು.

ಹವ್ಯಾಸ : ಇವರು 7 ನೇ ಮತ್ತು 8 ನೇ ತರಗತಿಯಲ್ಲಿ ಓದುತ್ತಿರುವ ವೇಳೆಯಲ್ಲಿ ಎರಡು ಕಿರು ಪ್ರಹಸನಗಳನ್ನು ರಚಿಸಿರುತ್ತಾರೆ. “ನನ್ನ ಹೆಂಡತಿ ಚೆಲುವೆ”. ಫ್ರೌಢಶಾಲೆಯ ಬಯಲು ರಂಗ ಮಂಟಪದಲ್ಲಿ ಪ್ರದರ್ಶನಗೊಂಡಿದ್ದರೆ, “ಬೇಟೆಗಾರರು” ಶಾಲೆಯ ಕಲಾಮಂದಿರದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ ಪ್ರದರ್ಶನಗೊಂಡಿತ್ತು. ಇವರು 10 ನೇ ತರಗತಿಯಲ್ಲಿ ಓದುತ್ತಿದ್ದ ವೇಳೆಯಲ್ಲಿ “ಪಾಲಿಗೆ ಬಂದ ಪಂಚಾಮೃತ” ಎಂಬ ನಾಟಕ ರಚಿಸಿದ್ದಾರೆ ಇವರು ಬರೆದ ಮೊದಲ ನಾಟಕವೆಂದರೆ “ಮೂಕನ ಮದುವೆ” ಅಪ್ರಕಟಿತವಾದರೂ ಇವರೇ ಮೂಕನ ಪಾತ್ರ ನಿರ್ವಹಿಸಿ ರಸಿಕರ ಮನ ಗೆದ್ದಿದ್ದಾರೆ..
ಎರಡನೇ ನಾಟಕ (ಅಪ್ರಕಟಿತ) “ವಿಧಿ ಸಂಕಲ್ಪ” ಕುಂದಾಪುರದಲ್ಲಿ ಹಲವಾರು ಬಾರಿ ಪ್ರದರ್ಶನಗೊಂಡು ಸುಮಾರು 1974-75 ನೇ ಸಾಲಿನಲ್ಲಿ ಇದೇ ನಾಟಕ ಕೃತಿ “ಸಂಸಾರ ನೌಕೆ” ಎಂಬ ಶೀರ್ಷಿಕೆಯಲ್ಲಿ ಮಂಗಳೂರು ಡಾನ್‌ಬಾಸ್ಕೊ ಹಾಲ್‌ನಲ್ಲಿ ರೇಖಾನ ರಾಮಚಂದ್ರರಾಯರ ನಿರ್ದೇಶನದಲಲ್ಲಿ ಪ್ರದರ್ಶನಗೊಂಡಿದೆ
ಮೂರನೇ ನಾಟಕ “ಆದರ್ಶ ಗ್ರಹಿಣಿ” ಬಳಿಕ ಇವರ ಇನ್ನೊಂದು ಅಪ್ರಕಟಿತ ನಾಟಕ “ಗಿರಿಗೀತೆ”ಯು 1981 ರಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ| ಕೋಟ ಶಿವರಾಮ ಕಾರಂತರ ಘನ ಅಧ್ಯಕ್ಷತೆಯಲ್ಲಿ ಅಂದಿನ ಕುಂದಾಪುರ ವಿಧಾನಸಭಾ ಸದಸ್ಯರಾದ ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿಯವರು ್ಲ ಪ್ರಥಮ ಪ್ರದರ್ಶನಕ್ಕೆ ಚಾಲನೆ ನೀಡಿದರು. “ಗಿರಿಗೀತೆ”ಯು “ಕಾಲ”ವಾಗಿ ಹೊಸ ಶೀರ್ಷಿಕೆ ಪಡೆದು ನೂರಕ್ಕೂ ಹೆಚ್ಚು ಬಾರಿ ಕನ್ನಡ, ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಪ್ರದರ್ಶನಗೊಂಡಿತ್ತು. ಸುಮಾರು 1996 ರಲ್ಲಿ “ಕಾಲ” ನಾಟಕವು ಇವರ ನಿರ್ದೇಶನದಲ್ಲಿ ಸ್ಪರ್ಧಾತ್ಮಕವಾಗಿ ಹಿಂದಿಯಲ್ಲಿ ಪ್ರದರ್ಶಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಲಭಿಸಿತ್ತು. ಅದೇ ಸಾಲಿನಲ್ಲಿ ಕೇಂದ್ರ ಸರಕಾರ ಮತ್ತು ಪಶ್ಚಿಮ ಬಂಗಾಳ ಸರಕಾರವು ಜಂಟಿಯಾಗಿ ಕೋಲ್ಕತ್ತದಲ್ಲಿ ಆಯೋಜಿಸಿದ್ದ ಯುವ ಜನೋತ್ಸವದಲ್ಲಿ “ಕಾಲ” ನಾಟಕವು ಲೇಖಕರ ನಿರ್ದೇಶನದಲ್ಲಿ ಸ್ಪರ್ಧಾತ್ಮಕವಾಗಿ ಅಭಿನಯಿಸಲು ರಾಷ್ಟ ಮಟ್ಟದಲ್ಲಿ ಬಹುಮಾನ ಲಭಿಸಿತು ಐದನೇ ನಾಟಕ ಮತ್ತು 1995 ರಲ್ಲಿ ಎನ್.ಆರ್.ಎ.ಎಂ.ಎಚ್. ಪ್ರಕಾಶನ, ಕೋಟೇಶ್ವರ ಇವರಿಂದ ಪ್ರಕಾಶನಗೊಂಡ ಮೊದಲ ನಾಟಕ “ಶಿಲ್ಪಿ” ರಂಗದಲ್ಲಿ ಪ್ರದರ್ಶನಗೊಂಡಿಲ್ಲವಾದರೂ 2017ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಪ್ರಥಮ ಬಿ.ಎಸಿ, ಬಿ.ಹೆಚ್.ಆರ್.ಡಿ, ಮತ್ತು ಎಫ್.ಎನ್.ಡಿ ವಿದ್ಯಾರ್ಥಿಗಳಿಗಾಗಿ ಪ್ರಸಾರಗೊಳಿಸಿದ ಪಠ್ಯಪುಸ್ತಕ “ನುಡಿ ಶಿಲ್ಪ” ಕೃತಿ ಮಂಗಳೂರು ವಿಶ್ವವಿದ್ಯಾನಿಲಯವು ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ.

ಕಥಾ ಚಿಂತನ :2009 ರಲ್ಲಿ ಶ್ರೀ ದೇವಿ ರಕ್ತೇಶ್ವರಿ ದೇವಸ್ಥಾನ, ಕುಂದಾಪುರ, ಇಲ್ಲಿ ದೇವಸ್ಥಾನದ ವತಿಯಿಂದಲೇ ಮುದ್ರಿಸಿ ಪ್ರಕಾಶನಗೊಳಿಸಿದ ಪೌರಾಣಿಕ ಕಥಾ ಚಿಂತನ “ಶ್ರೀ ದೇವಿ ರಕ್ತೇಶ್ವರಿ ವೈಭವ”. 2018 ರಲ್ಲಿ ಎನ್.ಆರ್.ಎಮ್.ಎಚ್. ಪ್ರಕಾಶನ, ಕೋಟೇಶ್ವರ, ಇವರು ಪ್ರಕಾಶನಗೊಳಿಸಿದ ಕಥಾ ಚಿಂತನ “ಸಂಧ್ಯಾಶ್ರಯ”. 2023 ರಲ್ಲಿ ಶ್ರೀ ಪಂಜುರ್ಲಿ ಮತ್ತು ಪರಿವಾರ ದೈವಗಳ ದೇವಸ್ಥಾನ, ಗರಗದ್ದೆ, ಕಾಳಾವರ, ಇಲ್ಲಿ ಹಸ್ತ ಪ್ರತಿರೂಪದಲ್ಲಿ ಬಿಡುಗಡೆಗೊಂಡ ಕಥಾ ಚಿಂತನ “ಸ್ಥಿತ” (ಕಾಳಾವರ್‌ಕರ್ ಸೇರಿ ಮೂರು ತಲೆಮಾರುಗಳು ಸಾಗಿಸಿಕೊಂಡು ಬಂದ ಬದುಕನ್ನು ಆಧರಿಸಿದೆ.
ಮಕ್ಕಳಿಗಾಗಿ ರಚಿಸಿದ ಕಿರು ಕೃತಿಗಳು : ಗಣೇಶನ ಜಾಣ್ಮೆ (ನಾಟಕ), ಭಕ್ತ ಪ್ರಹ್ಲಾದ (ನಾಟಕ), ರೇಣುಕಾ ಮಹಾತ್ಮೆ (ನಾಟಕ), ಕೌಸಲ್ಯ ಪರಿಣಯ (ನಾಟಕ)
ಚಲನಚಿತ್ರ ಉದ್ದೇಶಿತ ಕಥೆಗಳು :“ಮೂರು ನಾಟಕಗಳು” ಶೀರ್ಷಿಕೆಯಲ್ಲಿ “ಕಾಲ” 1996 ರಲ್ಲಿ ತುಳು ಚಿತ್ರವಾಗಿ ಬೆಳ್ಳಿತೆರೆಯಲ್ಲಿ ಮೂಡಿದೆ. ಈ ಚಿತ್ರ ಪನೋರಮಕ್ಕೆ ಆಯ್ಕೆಯಾಗಿದೆ. ರಾಜ್ಯ ಸರ್ಕಾರದಿಂದ ಅತ್ಯುತ್ತಮ ಕಥೆಗಾಗಿ ಪ್ರಶಸ್ತಿ ಬಂದಿದೆ. ಇವರ “ಪ್ರಶಸ್ತಿ”, “ಊರುಗೋಲು” – ಚಿತ್ರ ನಿರ್ಮಾಪಕರಿಗಾಗಿ ಕಾದಿದೆ. 2007 ರಲ್ಲಿ ಉಡುಪಿಯಲ್ಲಿ 74 ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ವತಿಯಿಂದ ಮುದ್ರಿಸಿದ ಮೂರು ಕಥೆಗಳನ್ನು ಒಳಗೊಂಡ ಕಥಾಸಂಚಯ ಬಿಡುಗಡೆಗೊಂಡಿದೆ. ಚಿತ್ರ ಕಥೆಗಳು-“ತಾಯ್ತನ”, “ನಿಸರ್ಗ”. ಪೌರಾಣಿಕ ಕಥಾಚಿಂತನ “ಶ್ರೀ ದೇವಿ ರಕ್ತೇಶ್ವರಿ ವೈಭವ ಕೂಡ ಹತ್ತು ಅಧ್ಯಯನಗಳನ್ನೊಳಗೊಂಡು “ಅಮ್ಮಾ ರಕ್ತೇಶ್ವರಿ” ಶೀರ್ಷಿಕೆಯಲ್ಲಿ ಚಲನಚಿತ್ರ ಕಥೆ-ಸಂಭಾಷಣೆ ಸಿದ್ಧವಾಗಿರುತ್ತದೆ. 1966-67 ನೇ ಸಾಲಿನಲ್ಲಿ ಇವರ ವೃತ್ತಿ ಜೀವನದ ವೇಳೆಯಲ್ಲಿ ರಚಿಸಿದ ನಾಟಕ “ಮೂಕನ ಮದುವೆ” (ಪ್ರೇಮದಾಸಿ) ಕೂಡ ಚಿತ್ರ ಸಾಹಿತ್ಯವಾಗಿ ರೂಪಗೊಂಡಿದೆ.
ಸ್ವರಚಿತ ಕಥಾಕಾಲಕ್ಷೇಪ ಕಥೆಗಳು :ಶ್ರೀ ವಿಘ್ನೇಶ್ವರ ಮಹಿಮೆ, ಶ್ರೀ ಶಬರಿ ಮಲೆ ಕ್ಷೇತ್ರ ಮಹಾತ್ಮೆ, ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ, ಶ್ರೀ ಕಚ್ಚೂರು ಕ್ಷೇತ್ರ ಮಹಾತ್ಮೆ, ಕೌಸಲ್ಯ ಪರಿಣಯ, ಶ್ರೀ ರಾಮ ಮಂತ್ರದ ಮಹಿಮೆ, ಭಕ್ತ ಪ್ರಹ್ಲಾದ
ಗೀತೆಗಳು: ಸಾವಿರಕ್ಕೂ ಮೀರಿ ಭಕ್ತಿಗೀತೆ, ಭಾವಗೀತೆ, ಶಿಶುಗೀತೆ, ಕುಂದಗನ್ನಡಗೀತೆ, ರಂಗಗೀತೆಗಳನ್ನು ರಚಿಸಿ ಸಾಂದರ್ಭಿಕವಾಗಿ ತಾನೇ ಹಾಡಿ ಗಾನ ಪ್ರಿಯರ ಮನಗೆದ್ದಿದ್ದಾರೆ. ಶ್ರೀ ಮೂಕಾಂಬಿಕಾ ಭಕ್ತಿಗೀತೆಗಳು, ಶ್ರೀ ದೇವಿ ರಕ್ತೇಶ್ವರಿ ಭಕ್ತಿಗೀತೆಗಳು (ಧ್ವನಿ ಸುರುಳಿ ಬಿಡುಗಡೆಯಾಗಿದೆ), ಶ್ರೀ ಕಾಳಿಕಾಂಬ ಭಕ್ತಿಗೀತೆಗಳು, ಶ್ರೀ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತಿಗೀತೆಗಳು, ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಕಾಳಾವರ) ಭಕ್ತಿಗೀತೆಗಳು, ಶ್ರೀ ಕಚ್ಚೂರು ಮಾಲ್ತಿದೇವಿ ಭಕ್ತಿಗೀತೆಗಳು
ಯಕ್ಷಗಾನ ಪ್ರಸಂಗಗಳು :“ಚಿರಂಜೀವಿ” ಶ್ರೀ ಕ್ಷೇತ್ರ ಹಾಲಾಡಿ ಮೇಳದವರಿಂದ್ಲ ಪ್ರದರ್ಶನಗೊಂಡಿದೆ. ಹೊಸ ರೂಪಾಂತರಗೊAಡ ಈ ಪ್ರಸಂಗವು “ದೈವ ಸಂಕಲ್ಪ” ಎನ್ನುವ ಶೀರ್ಷಿಕೆಯಲ್ಲಿ 2023 ರಂದು ಶ್ರೀ ಪಂಜುರ್ಲಿ ಮತ್ತು ಪರಿವಾರ ದೈವಗಳ ದೇವಸ್ಥಾನ, ಗರಗದ್ದೆ, ಕಾಳಾವರ ಇಲ್ಲಿ ಕೃತಿ ಬಿಡುಗಡೆಯಾಗಿದೆ. “ಪ್ರೇಮಾಂಜಲಿ” ಶಿಲ್ಪಿ ನಾಟಕ ಆಧಾರಿತವಾದ ಈ ಪ್ರಸಂಗವು 2011 ರಲ್ಲಿ ಶ್ರೀ ಕ್ಷೇತ್ರ ಅಮೃತೇಶ್ವರಿ ಮೇಳದವರಿಂದ “ಕಚ್ಚೂರು ಶ್ರೀ ಮಾಲ್ತಿದೇವಿ ಮಹಿಮೆ” 2018 ರಲ್ಲಿ ಹಟ್ಟಿಯಂಗಡಿ ಮೇಳದವರಿಂದ ಪ್ರದರ್ಶನಗೊಂಡಿದೆ. ಕಾಲ ನಾಟಕ ಆಧರಿತ“ನಾಗಾಂಬಿಕೆ” ಪ್ರಸಂಗವು ಶ್ರೀ ಹಟ್ಟಿಯಂಗಡಿ ಮೇಳದವರಿಂದ ಬಿಡುಗಡೆಗೊಂಡು ಪ್ರಸ್ತುತ 2023 ರ ತಿರುಗಾಟದಲ್ಲಿ ಯಶಸ್ವಿಯಾಗಿದೆ.
ಚಲನ ಚಿತ್ರ, ನಾಟಕ, ಯಕ್ಷಗಾನ, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ತನ್ನನ್ನು ತಾನು ರಾಷ್ಟ್ರ ಮಟ್ಟದ ವರೆಗೂ ಗುರುತಿಸಿಕೊಂಡಿರುವ ಕಾಳಾವರ್ಕರ್ ರವರಿಗೆ ರಾಷ್ಟ್ರ ಪ್ರಶಸ್ತಿ, ಗೌರವ ಡಾಕ್ಟರೇಟ್ ಪದವಿ ಲಭಿಸಲೆಂದು ಕನ್ನಡ ಕರಾವಳಿ ಬಳಗದ ವತಿಯಿಂದ ಶುಭ ಹಾರೈಕೆಗಳು.
- —-ಸುಧಾಕರ ವಕ್ವಾಡಿ






