ಕ್ರೀಡೆ

ಕೋಚ್‌ ಹುದ್ದೆಯಿಂದ ರಾಹುಲ್ ದ್ರಾವಿಡ್‌ ನಿರ್ಗಮನ..!

Views: 78

ನವದೆಹಲಿ,- ಭಾರತೀಯ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಯಿಂದ ಕನ್ನಡಿಗ ರಾಹುಲ್‌ ದ್ರಾವಿಡ್‌ ಅವರು ಬದಲಾಗುವ ಸಾಧ್ಯತೆಗಳಿವೆ.ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್‌ ಶಾ ಅವರು ಹೊಸ ಮುಖ್ಯ ಕೋಚ್‌ ಅನ್ನು ನೇಮಕ ಮಾಡುವ ಜಾಹೀರಾತನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಘೋಷಿಸಿದ ನಂತರ ರಾಹುಲ್‌ ಅವರು ಮುಖ್ಯ ಕೋಚ್‌ ಹುದ್ದೆಯಿಲ್ಲಿ ಮುಂದುವರೆಯುವುದಿಲ್ಲ ಎನ್ನುವುದು ಸಾಬೀತಾಗಿದೆ.

ನವೆಂಬರ್‌ 2021 ರಿಂದ ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ ಮತ್ತು 2023 ರ ಏಕದಿನ ವಿಶ್ವಕಪ್‌ ಮುಕ್ತಾಯದ ನಂತರ ಅವರ ಒಪ್ಪಂದವನ್ನು ವಿಸ್ತರಿಸಲಾಯಿತು. ಆದರೆ, ದ್ರಾವಿಡ್‌ಗೆ ಮತ್ತೆ ಅವಧಿ ವಿಸ್ತರಣೆಯಾಗುವ ಹಾಗೆ ಕಾಣುತ್ತಿಲ್ಲ. ಶೀಘ್ರದಲ್ಲೇ ಹೊಸ ಕೋಚ್‌ಗಾಗಿ ಮಂಡಳಿಯು ಜಾಹೀರಾತನ್ನು ಹೊರತರಲಿದೆ.ಭಾರತ ತಂಡದ ಮುಖ್ಯ ತರಬೇತುದಾರರಾಗಿ ಬಿಸಿಸಿಐ ಜೊತೆಗಿನ ದ್ರಾವಿಡ್‌ ಅವರ ಪ್ರಸ್ತುತ ಒಪ್ಪಂದವು ಜೂನ್‌ನಲ್ಲಿ ಮುಕ್ತಾಯಗೊಳ್ಳುತ್ತದೆ, ಆಗ ಭಾರತ ತಂಡವು ಟಿ20 ವಿಶ್ವಕಪ್‌ ಅಭಿಯಾನದಲ್ಲಿ ಭಾಗಿಯಾಗಲಿದೆ.

ದ್ರಾವಿಡ್‌ ಅವರು ಬಯಸಿದಲ್ಲಿ ಮಾತ್ರ ಮತ್ತೆ ಅವರು ತಮ ಪಾತ್ರಕ್ಕಾಗಿ ಅರ್ಜಿ ಸಲ್ಲಿಸಬಹುದು ಆದರೆ ಹಿಂದಿನಂತೆ ಯಾವುದೇ ಸ್ವಯಂಚಾಲಿತ ವಿಸ್ತರಣೆ ಇರುವುದಿಲ್ಲ ಎಂದು ಜಯ್‌ ಶಾ ಖಚಿತಪಡಿಸಿದ್ದಾರೆ.

Related Articles

Back to top button
error: Content is protected !!